Home Uncategorized ದುರಂತದಲ್ಲಿ ಮನೆ ಕಳೆದುಕೊಂಡ ಕುಟುಂಬಕ್ಕೆ ವಾಸಿಸಲು ತಮ್ಮ ಸ್ವಂತ ಮನೆ ನೀಡಿದ ಕುರುವಳ್ಳಿ ನಾಗರಾಜ್;

ದುರಂತದಲ್ಲಿ ಮನೆ ಕಳೆದುಕೊಂಡ ಕುಟುಂಬಕ್ಕೆ ವಾಸಿಸಲು ತಮ್ಮ ಸ್ವಂತ ಮನೆ ನೀಡಿದ ಕುರುವಳ್ಳಿ ನಾಗರಾಜ್;

by Mahesh malenaadu

ದುರಂತದಲ್ಲಿ ಮನೆ ಕಳೆದುಕೊಂಡ ಕುಟುಂಬಕ್ಕೆ ವಾಸಿಸಲು ತಮ್ಮ ಸ್ವಂತ ಮನೆ ನೀಡಿದ ಕುರುವಳ್ಳಿ ನಾಗರಾಜ್ ಡಾ. ಆರ್. ಎಂ. ಮಂಜುನಾಥ್ ಗೌಡ ಸಮ್ಮುಖದಲ್ಲಿ ಗೃಹೋಪಯೋಗಿ ವಸ್ತುಗಳ ಹಸ್ತಾಂತರ.

ತೀರ್ಥಹಳ್ಳಿ: ಪಟ್ಟಣದ ಗಾಂಧಿನಗರದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಗುಡ್ಡ ಕುಸಿತ ದುರಂತದಲ್ಲಿ ಮೂರು ಮಂದಿ ಕಾರ್ಮಿಕರು ಮೃತಪಟ್ಟಿದ್ದು, ವೀಣಾ–ರಮೇಶ್ ಗೌಡ ದಂಪತಿಗಳ ಮನೆ ಸಂಪೂರ್ಣ ನಾಶವಾಗಿದೆ. ಮನೆ ಕಳೆದುಕೊಂಡ ಕುಟುಂಬವು ತಾತ್ಕಾಲಿಕವಾಗಿ ಅಕ್ಕಪಕ್ಕದ ಮನೆಯಲ್ಲೇ ಆಶ್ರಯ ಪಡೆದು ಸಂಕಷ್ಟದ ಜೀವನ ನಡೆಸುತ್ತಿತ್ತು.
ಈ ಕುಟುಂಬದ ದುಸ್ಥಿತಿಯನ್ನು ಅರಿತ ಜಯ ಕರ್ನಾಟಕ ಸಂಘಟನೆಯ ತೀರ್ಥಹಳ್ಳಿ ತಾಲೂಕು ಅಧ್ಯಕ್ಷರಾದ ಕುರುವಳ್ಳಿ ನಾಗರಾಜ್, ಪಟ್ಟಣ ಪಂಚಾಯಿತಿ ಹಾಗೂ ತಾಲೂಕು ಆಡಳಿತದಿಂದ ಶಾಶ್ವತ ವ್ಯವಸ್ಥೆ ಆಗುವವರೆಗೆ ತಮ್ಮ ಕುರುವಳ್ಳಿಯ ಸ್ವಂತ ಮನೆಯನ್ನು ತಾತ್ಕಾಲಿಕ ವಾಸಕ್ಕೆ ನೀಡುವ ಮೂಲಕ ಅಪರೂಪದ ಮಾನವೀಯತೆ ಮೆರೆದಿದ್ದಾರೆ.

ಇದೇ ಸಂದರ್ಭದಲ್ಲಿ, ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಆರ್. ಎಂ. ಮಂಜುನಾಥ್ ಗೌಡ ಅವರ ಸಮ್ಮುಖದಲ್ಲಿ ರಮೇಶ್ ಗೌಡ ಅವರ ಕುಟುಂಬಕ್ಕೆ ಅಗತ್ಯ ಗೃಹೋಪಯೋಗಿ ವಸ್ತುಗಳನ್ನು ಹಸ್ತಾಂತರಿಸಲಾಯಿತು.
ಈ ಕಾರ್ಯಕ್ಕೆ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಅವರ ಆಪ್ತರು ಹಾಗೂ ಕನಕಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ. ಆರ್. ಮಧುಸೂದನ್ (ಮಧು) ಅವರ ನೆರವು ದೊರೆತಿದ್ದು, ಜೊತೆಗೆ ತಾಯಿಮನೆ ಸುದರ್ಶನ್, ಶಿವಮೊಗ್ಗ ವಿನೋಬನಗರದ ಎಂ ಶೀಕಾಂತ್ ಅವರ ಸಂಬಂಧಿ ರಾಕೇಶ್ ಹಾಗೂ ಕುರುವಳ್ಳಿ ನಾಗರಾಜ್ ಅವರ ಅಪಾರ ಸ್ನೇಹಿತರ ಬಳಗದ ಸಹಕಾರದಿಂದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಕುಟುಂಬಕ್ಕೆ ವಿತರಿಸಲಾಯಿತು.

ಈ ಸಮಾಜಮುಖಿ ಹಾಗೂ ಮಾನವೀಯ ಕಾರ್ಯಕ್ರಮದಲ್ಲಿ ಅಂಜನ್ ಹೆಗ್ಡೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಡಾ. ಸುಂದರೇಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ರಾಘವೇಂದ್ರ ರವೀಂದ್ರ ಶೆಟ್ಟಿ, ಮಿಲ್ಕೇರಿ ಹರೀಶ್ ಶೆಟ್ಟಿ, ಅರ್ಜುನ್ ಗೌಡ ಮಳೂರು, ಕವಿರಾಜ್ ಮೇಗರವಳ್ಳಿ, , ಸನತ್ ಗೌಡ ಕೊಳವಾಡಿ, ಶ್ರೀಕಾಂತ್ ಬೆಟ್ಟಮಕ್ಕಿ, ಕುರುವಳ್ಳಿ ಗುಂಡ, ಸಚಿನ್ ಶೆಟ್ಟಿ ಭಾರತೀಪುರ , ರಂಜಿತ್ ಅರವಿಂದ್ ಮೆಲಿನ್ ಕುರುವಳ್ಳಿ ಸೇರಿದಂತೆ ಅನೇಕ ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು

Spread the love

You may also like

Leave a Comment