Home ಅಪರಾಧ ಶಿವಮೊಗ್ಗದಲ್ಲಿ ಪೊಲೀಸರ ದಿಢೀರ್ ಕಾರ್ಯಾಚರಣೆ: ನಗರದ ಲಾಡ್ಜ್‌ಗಳ ಮೇಲೆ ದಾಳಿ, ತಪಾಸಣೆ

ಶಿವಮೊಗ್ಗದಲ್ಲಿ ಪೊಲೀಸರ ದಿಢೀರ್ ಕಾರ್ಯಾಚರಣೆ: ನಗರದ ಲಾಡ್ಜ್‌ಗಳ ಮೇಲೆ ದಾಳಿ, ತಪಾಸಣೆ

by Mahesh malenaadu

ಶಿವಮೊಗ್ಗ : ನಗರದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಿಶೇಷ ತಪಾಸಣಾ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಕಾರ್ಯಾಚರಣೆಯ ಭಾಗವಾಗಿ ನಗರದ ವಿವಿಧ ಲಾಡ್ಜ್‌ಗಳಿಗೆ ಪೊಲೀಸರ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

​ತಪಾಸಣೆ ವೇಳೆ ಲಾಡ್ಜ್‌ಗಳ ಗ್ರಾಹಕರ ನೋಂದಣಿ ಪುಸ್ತಕ ಹಾಗೂ ಲೆಡ್ಜರ್‌ಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಪ್ರಸ್ತುತ ಲಾಡ್ಜ್‌ಗಳಲ್ಲಿ ತಂಗಿರುವ ವ್ಯಕ್ತಿಗಳ ಮಾಹಿತಿ ಹಾಗೂ ಸಂಶಯಾಸ್ಪದವಾಗಿ ಕಂಡುಬಂದವರ ಹಿನ್ನೆಲೆಯನ್ನು ಪೊಲೀಸರು ಕಲೆಹಾಕಿದರು.
​ಜೊತೆಗೆ, ಲಾಡ್ಜ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಾತರಿಪಡಿಸಿಕೊಂಡ ಪೊಲೀಸರು, ಭದ್ರತಾ ಮುನ್ನೆಚ್ಚರಿಕೆ ವಹಿಸುವಂತೆ ಹಾಗೂ ನಿಯಮಗಳನ್ನು ತಪ್ಪದೇ ಪಾಲಿಸುವಂತೆ ಲಾಡ್ಜ್‌ ಮಾಲೀಕರು ಮತ್ತು ಸಿಬ್ಬಂದಿಗೆ ಸೂಕ್ತ ಸೂಚನೆಗಳನ್ನು ನೀಡಿದರು.

Spread the love

You may also like

Leave a Comment