Home ಅಪರಾಧ ಶಿವಮೊಗ್ಗದ ಸಾಗರ ಡಿವೈಎಸ್ಪಿ ಕಚೇರಿ ಕೂಗಳತೆ ದೂರದಲ್ಲೇ ಪತ್ತೆಯಾಯ್ತು ಬೃಹತ್ ಗಾಂಜಾ ಗಿಡ.

ಶಿವಮೊಗ್ಗದ ಸಾಗರ ಡಿವೈಎಸ್ಪಿ ಕಚೇರಿ ಕೂಗಳತೆ ದೂರದಲ್ಲೇ ಪತ್ತೆಯಾಯ್ತು ಬೃಹತ್ ಗಾಂಜಾ ಗಿಡ.

by Mahesh malenaadu

ಶಿವಮೊಗ್ಗ: ಸಾಗರ ಉಪವಿಭಾಗದ ಡಿವೈಎಸ್ಪಿ ಕಚೇರಿಯ ಕೆಲವೇ ಮೀಟರ್‌ಗಳ ಅಂತರದಲ್ಲಿ ಬೃಹತ್ ಗಾತ್ರದ ಗಾಂಜಾ ಗಿಡವೊಂದು ಪತ್ತೆಯಾಗಿದೆ,

ಈ ಘಟನೆಯು ಸಾಗರದ ಪ್ರಜ್ಞಾವಂತರನ್ನು ಬೆಚ್ಚಿಬೀಳಿಸಿದೆ
ನಿರ್ಜನ ಹಾಗೂ ಸಾರ್ವಜನಿಕರ ಓಡಾಟ ಕಡಿಮೆ ಇರುವ ಒಳ ರಸ್ತೆಯಲ್ಲಿ ಪತ್ತೆಯಾಗಿರುವ ಗಾಂಜಾ ಗಿಡ, ಕಿಡಿಗೇಡಿಗಳು ಹಾಗೂ ಮಾದಕ ದ್ರವ್ಯ ವ್ಯಸನಿಗಳಿಗೆ ಅಡ್ಡೆ ಆಯ್ತಾ ಈ ಜಾಗ, ವ್ಯವಸ್ಥಿತವಾಗಿ ಬೀಜ ಬಿತ್ತಿ ಗಿಡ ಬೆಳೆಸಲಾಗುತ್ತಿದೆಯಾ ಎಂಬ ಗಂಭೀರ ಸಂಶಯ ವ್ಯಕ್ತವಾಗಿದೆ.

ಇಷ್ಟು ದೊಡ್ಡ ಮಟ್ಟದಲ್ಲಿ ಗಿಡ ಬೆಳೆಯುವವರೆಗೂ ಯಾರ ಕಣ್ಣಿಗೂ ಬೀಳದಿರುವುದೇ ಆಶ್ಚರ್ಯ, ಗಾಂಜಾ ಜಾಲಕ್ಕೆ ನಗರದ ಯುವ ಸಮುದಾಯ ಬಲಿಯಾಗುವ ಮುನ್ನ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಲಿ ಎಂಬುದು ಸಾರ್ವಜನಿಕರ ಆಶಯ.

Spread the love

You may also like

Leave a Comment