99
ಶಿವಮೊಗ್ಗ :ಜಿಲ್ಲೆಯ ಸಾಗರ ತಾಲೂಕು ಸಾಗರ ಪಟ್ಟಣದ ಅಣಲೆಕೊಪ್ಪದ ಉಮಾ ಎಂಬುವವರ ಮನೆಯ ಗಾಡ್ರೇಜ್ ನಲ್ಲಿ ಇಟ್ಟಿದ್ದ 2,54.000 ರೂ. ನಗದು ಹಣ ಕಳ್ಳತನವಾಗಿದೆ ಎಂದು ಉಮಾ ರವರು ನೀಡಿದ ದೂರಿನ ಮೇರೆಗೆ.
ಸಾಗರ ಟೌನ್ ಪೋಲಿಸರು ಮಿಂಚಿನ ಕಾರ್ಯಚರಣೆ ನಡೆಸಿ ಆರೋಪಿಯಾದ ಪಾಂಡುರಂಗ ಎಂಬುವವನನ್ನು ಬಂದಿಸಲಾಗಿದೆ. ಮೂಲತಹ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಹಾತ್ ಕಾಂಬಾ ಗ್ರಾಮದ ನಿವಾಸಿ ಪಾಂಡುರಂಗ ಉಮಾರಿಗೆ ಸಣ್ಣ ಪುಟ್ಟ ಕೆಲಸವನ್ನು ಮಾಡಿಕೊಡುತ್ತಿದ್ದ, ಉಮಾರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಸಾಗರ ಟೌನ್ ಪೋಲಿಸರು ಕೆಲವೇ ಗಂಟೆಗಳಲ್ಲಿ ಆರೋಪಿ ಪಾಂಡುರಂಗ (35) ಬಂಧಿಸಿ ಆರೋಪಿಯಿಂದ 2,29,900 ರೂ. ಹಣ ವಶಪಡಿಸಿಕೊಳ್ಳಲಾಗಿದೆ.

