Home Student Life ಕೆ.ಎಸ್.ಆರ್.ಟಿ.ಸಿ. ಬಸ್ ತಡೆದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಸಮಯ ಬದಲಿಸಲು ಆಗ್ರಹ

ಕೆ.ಎಸ್.ಆರ್.ಟಿ.ಸಿ. ಬಸ್ ತಡೆದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಸಮಯ ಬದಲಿಸಲು ಆಗ್ರಹ

by Mahesh malenaadu

ತೀರ್ಥಹಳ್ಳಿ:ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸಾಲೂರು, ಕೊಂಡ್ಲೂರು ಗ್ರಾಮಗಳಿಗೆ ಸರ್ಕಾರಿ ಬಸ್ ಸಮಯ ಬದಲಾಯಿಸಲು ಆಗ್ರಹಿಸಿ ಇಂದು ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಪ್ರತಿಭಟನೆ ನಡೆಸಿದರು.

ಸಮಯಕ್ಕೆ ಬಸ್ ಇಲ್ಲ, ತರಗತಿಗೂ ತಲುಪಲಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೆ, ಸಮಯಕ್ಕೆ ಸಯಿಗಾಗಿ ಕೆಲಕ್ಕೆ ತೆರಳಲಾಗುತ್ತಿಲ್ಲ ಎಂದು ಉದ್ಯೋಗಿಗಳು ಆರೋಪಿಸಿದ್ದಾರೆ.

ಪ್ರಸ್ತುತ ಬಸ್ ಸಂಚಾರದ ಸಮಯವು ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತ ಪಡಿಸಿದ್ದು,

ಬಸ್ ಸಮಯ ಶಾಲಾ ಕಾಲೇಜುಗಳ ಆರಂಭದ ವೇಳೆಗೆ ಹೊಂದಿಕೆಯಾಗುತ್ತಿಲ್ಲ, ಬಸ್ ವೇಳಾಪಟ್ಟಿಯಲ್ಲಿನ ಅಸಮರ್ಪಕತೆಯಿಂದ ಪ್ರತಿನಿತ್ಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಉದ್ಯೋಗಿಗಳು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯ ಹಾಗೂ ಉದ್ಯೋಗಿಗಳ ಕೆಲಸದ ಸಮಯವನ್ನು ಗಮನದಲ್ಲಿಟ್ಟುಕೊಂಡು ಬಸ್ ವೇಳಾಪಟ್ಟಿಯನ್ನು ಕೂಡಲೇ ಮರುಪರಿಶೀಲಿಸಬೇಕೆಂದು,
ಶಾಲಾ ಕಾಲೇಜುಗಳ ಆರಂಭದ ಸಮಯಕ್ಕೆ ಹಾಗೂ ಉದ್ಯೋಗಿಗಳ ಕೆಲಸದ ವೇಳೆಗೆ ಅನುಕೂಲವಾಗುವಂತೆ ಬಸ್ ಸಂಚಾರವನ್ನು ಮರು ನಿಗದಿ ಮಾಡ ಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

Spread the love

You may also like

Leave a Comment