ಶಿವಮೊಗ್ಗ: ಹೊಳೆಹೊನ್ನೂರು ಪ.ಪಂ. ರಿಂಗ್ ರೋಡ್ ಹೋರಾಟ ಸಮಿತಿ ರೈತರ ಜೊತೆಗೂಡಿ ಪ್ರತಿಭಟನೆ ನಡೆಸಲಾಗಿದ್ದು, ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದಿಂದ ರಸ್ತೆಯುದ್ದಕ್ಕು ಪ್ರತಿಭಟನೆ ನಡೆಸಿ ಪ್ರತಿಭಟನಾ ನಿರತ ರೈತರು,
ಪ.ಪಂ.ಗಳಿಗೆ Road Network Grid Plan ಪ್ರಕಟಣೆ ಹೊರಡಿಸಲಾಗಿದೆ
ಅಧಿಸೂಚನೆ ಹೊರಡಿಸಿ 1 ತಿಂಗಳಾದರೂ ಬಾಧಿತ ಗ್ರಾಮಗಳಿಗೆ ಮತ್ತು ಸಂಬಂಧಪಟ್ಟ ರೈತರಿಗೆ ಈ ವಿಚಾರ ಗಮನಕ್ಕೆ ಬಂದಿಲ್ಲ, ಯಾವ ಸರ್ವೆ ನಂಬರ್‌ನಲ್ಲಿ ಗ್ರಿಡ್ ಲೈನ್ ಹೋಗುತ್ತದೆ ಎಂಬುದನ್ನು ತಿಳಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದು, ರೈತರಿಗೆ ತಿಳುವಳಿಕೆ ನೀಡದೇ ಅಧಿಕಾರಿಗಳು ದರ್ಪ ಮೆರೆದಿದ್ದಾರೆ ಎಂದು ಆರೋಪಿಸಿದ್ದಾರೆ.
Road Network Grid Plan ಅವೈಜ್ಞಾನಿಕವಾಗಿ ಕೆರೆಗಳ ಮೇಲೆ, ಗುಡ್ಡದ ಮೇಲೆ, ಹಳ್ಳ ಕೊಳ್ಳಗಳ ಮೇಲೆ ಹಾಲಿ ಇರುವ ಮುಖ್ಯ ರಸ್ತೆಗಳ ಅಕ್ಕಪಕ್ಕದಲ್ಲೇ ಹಾದು ಹೋಗುತ್ತದೆ, ಈ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ರಸ್ತೆ ಮಾಡಿದರೆ ಆರ್ಥಿಕ ನಷ್ಟಕ್ಕೊಳಗಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇದೆ ಇದರಿಂದಾಗಿ ಈ ಅವೈಜ್ಞಾನಿಕವಾದ ರಸ್ತೆಯನ್ನು ಕೈಬಿಡಬೇಕೆಂದು ರೈತರ ಆಗ್ರಹ ವ್ಯಕ್ತ ಪಡಿಸಿದ್ದಾರೆ.
ಇನ್ನು ರೈತರ ಈ ಪ್ರತಿಭಟನೆಗೆ ಜೆ ಡಿ ಎಸ್ ಶಾಸಕಿ ಶಾರದ ಪೂರ್ಯನಾಯ್ಕ ರೈತರಿಗೆ ಸಾಥ್ ನೀಡಿದರು.

