ಶಿವಮೊಗ್ಗದ: ಏರ್ಪೋರ್ಟ್ ರಸ್ತೆಯಲ್ಲಿರುವ ಕೊರಲಹಳ್ಳಿ ಗ್ರಾಮದ ನಾಗರಾಜ್ ಎಂಬ ರೈತನಿಗೆ ಸೇರಿರುವ ತೋಟದಲ್ಲಿ ಈ ಘಟನೆ ನಡೆದಿದ್ದು, ಲೋಲಾಕ್ಷಿ ಎಂಬುವವರ ಪುತ್ರನಾಗಿರುವ ಸಂತೋಷ್ ಎಂಬಾತನಿಂದ ಈ ಕೃತ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಮಚ್ಚು ಹಿಡಿದು ತೋಟದಲ್ಲಿ ಸಂತೋಷ್ ಓಡಾಡುತ್ತಿರುವ ವಿಡಿಯೋ ಮಾಡಿರುವ ರೈತ ನಾಗರಾಜ್ ವಿಡಿಯೋ ಮಾಡುತ್ತಿರುವುದು ಕಂಡು ಸಂತೋಷ್ ಮಚ್ಚಿನಿಂದ ಅಟ್ಯಾಕ್ ಮಾಡಲು ಮುಂದಾಗಿದ್ದು ಈ ವೇಳೆ ತಪ್ಪಸಿಕೊಂಡು ಪ್ರಾಣ ಉಳಿಸಿಕೊಂಡಿರುವುದಾಗಿ ತೋಟದ ಮಾಲಿಕ ನಾಗರಾಜ್ ಗಂಭೀರವಾಗಿ ಆರೋಪಿಸಿದ್ದಾರೆ.
ತಮ್ಮ ಭಾಗದ 1 ಎಕರೆಯಲ್ಲಿ 5 ತಿಂಗಳ ಬಾಳೆ ಗಿಡ, 5 ವರ್ಷದ ನುಗ್ಗೆ ಗಿಡ, ಬೆಂಡೆ ಗಿಡ, ಬೀನ್ಸ್ ಬಳ್ಳಿ ಇನ್ನು ಇತರೇ ತರಕಾರಿಗಳನ್ನು ಬೆಳೆದಿದ್ದ ರೈತ ನಾಗರಾಜ್.
ಆ. 20 ರಂದು ನಡೆದಿರುವ ಘಟನೆ ಬಗ್ಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸುಮಾರು 200-300 ಗಿಡಗಳನ್ನು ಆರೋಪಿ ಸಂತೋಷ್ ಕಡಿದಿರುವುದಲ್ಲದೆ
ಕೊಲೆ ಮಾಡುವ ಉದ್ದೇಶದಿಂದ ಹೊಡೆಯಲು ಸಂತೋಷ್ ಬಂದಿದ್ದನೆ, ಮಾದಕ ವಸ್ತು, ಮದ್ಯಪಾನ, ಎಲ್ಲಾ ದುಷ್ಟಟಗಳಿಗೂ ಬಲಿಯಾಗಿರುವ ಸಂತೋಷ್ ಬಾಳೆ ಗಿಡಗಳಲ್ಲದೇ ಸುಮಾರು 2 ಲಕ್ಷ ರೂ. ಬೆಲೆ ಬಾಳುವ ವಸ್ತುಗಳನ್ನು ಕೂಡ ನಾಶ ಪಡಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರು ಈತನ ಮೇಲೆ ಕ್ರಮ ಕೈಗೊಳ್ಳಲು ನೊಂದ ರೈತ ನಾಗರಾಜ್ ಮನವಿ ಮಾಡಿಕೊಂಡಿದ್ದಾರೆ.

