ಶಿವಮೊಗ್ಶಿಗ: ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ತೀರ್ಥಹಳ್ಳಿಯಲ್ಲಿ ಕಸ್ತೂರಿ ರಂಗನ್ ವರದಿ ಕುರಿತಂತೆ ಬಹಿರಂಗ ಸಮಾವೇಶ ಆಯೋಜಿಸಲಾಗಿದ್ದು ರೈತರು ಹಾಗೂ ಮುಖಂಡರೊಂದಿಗೆ ಸಂವಾದ ನಡೆಸಿದ ಬಳಿಕ ಸಮಾವೇಶದಲ್ಲಿ ಸಿಎಂ ಪಾಲ್ಗೊಳ್ಳಲಿದ್ದಾರೆ,
ಕಸ್ತೂರಿ ರಂಗನ್ ವರದಿ ಬಗ್ಗೆ ತುರ್ತು ಅಧಿವೇಶನ ಕರೆದಿರುವ ಹಿನ್ನೆಲೆಯಲ್ಲಿ ಸಂಚಾರ ಕೈಗೊಂಡಿರುವ ಮುಖ್ಯಮಂತ್ರಿಗಳು ಕಸ್ತೂರಿ ರಂಗನ್ ವರದಿಯಿಂದ ತೊಂದರೆಯಾಗುವ 6 ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ.
ಕಸ್ತೂರಿ ರಂಗನ್ ವರದಿ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುವ ಸಲುವಾಗಿ ಬಾಧಿತ ಜಿಲ್ಲೆಗಳ ಭೇಟಿ ಕೈಗೊಂಡಿದ್ದು ಈಗಾಗಲೇ ಹಲವಾರು ಪಾದಯಾತ್ರೆ, ಪ್ರತಿಭಟನೆ ಮೂಲಕ ಗಮನ ಸೆಳೆಯಲಾಗಿದೆ, ಸಂಘ, ಸಂಸ್ಥೆಗಳು, ರೈತರು, ಹಾಗೂ ತೊಂದರೆಗೀಡಾಗುವ ಜನರಿಂದ ಸಿಎಂ ಜೊತೆ ಸಂವಾದ ನಡೆಸಿ ಸಮಸ್ಯೆ ಆಲಿಸಲಿದ್ದಾರೆ, ಯು.ಆರ್. ಅನಂತಮೂರ್ತಿ ಪಿಯು ಕಾಲೇಜು ಮೈದಾನದಲ್ಲಿ ಸಮಾವೇಶ ಆಯೋಜಿಸಲಾಗಿದೆ
ಮಧ್ಯಾಹ್ನ ಒಂದು ಗಂಟೆಗೆ ಬಾಳೆಹೊನ್ನೂರಿನಲ್ಲಿ ಸಮಾವೇಶ ಇರುವುದರಿಂದ ಸಿಎಂ 12 ಗಂಟೆಗೆ ಸಮಾವೇಶ ಮುಗಿಸಿ ತೆರಳಲಿದ್ದಾರೆ ಹಸಿವು, ಉದ್ಯೋಗ ಮನಸ್ಸಿನಲ್ಲಿಟ್ಟುಕೊಂಡು ಜೀವನ ನಡೆಸಬೇಕಿದೆ ಸಮಾವೇಶದಲ್ಲಿ ಸುಮಾರು 25 ಸಾವಿರ ಜನರು ಸೇರುವ ನಿರೀಕ್ಷೆ ಇದ್ದು ಕಸ್ತೂರಿ ರಂಗನ್ ವರದಿಯಿಂದ ಮಲೆನಾಡು ಭಾಗದಲ್ಲಿ ಸಾಕಷ್ಟು ಜನ ರೈತರು ಆತಂಕಗೊಂಡಿದ್ದಾರೆ
ಹೀಗಾಗಿ ಸಮಾವೇಶದ ಮೂಲಕ ಈ ಬಗ್ಗೆ ರಾಜ್ಯದ ಗಮನ ಸೆಳೆಯಲಾಗುತ್ತಿದೆ, ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲು ತೀರ್ಮಾನಿಸಿದ್ದಾರೆ.
*ಎರಡು ಪ್ಯಾರಾ ವಂದೇ ಮಾತರಂ ಗಾಯನದ ಬಗ್ಗೆ ಶಾಸಕ ಚನ್ನಬಸಪ್ಪ ಅಪಸ್ವರ ವಿಚಾರ*
ಎಲ್ಲರನ್ನೂ ಒಟ್ಟಾಗಿಸಲು ಹಾಡುಗಳು, ಬಾವುಟಗಳಿವೆ ಇವೇಯೆ ಹೊರತು ಇವುಗಳೆಲ್ಲ ನಮ್ಮ ಜೀವನ ಕಟ್ಟಿಕೊಡುವುದಿಲ್ಲ ಇದರಿಂದ ಹಸಿವು, ಜೀವನವು ನೀಗುವುದಿಲ್ಲ, ಇಂತಹ ವಿಷಯಗಳ ಬಗ್ಗೆ ನಾವುಗಳು ಹೆಚ್ಚು ಚರ್ಚಿಸಬಾರದು
ನಾವೆಲ್ಲಾ ಒಂದೇ ಎನ್ನಲು ಇಂತಹ ಗಾಯನಗಳು ಅಗತ್ಯವಾಗಿದೆ ಹೊರತು
ಅದು ಯಾವ ಸ್ವರೂಪದ್ದು ಎನ್ನುವುದು ಹೆಚ್ಚು ಮುಖ್ಯವಲ್ಲ. ಎಂದು ಸೂಕ್ಷ್ಮವಾಗಿ ಉತ್ತರಿಸಿದರು.

