198
ಶಿವಮೊಗ್ಗ: ಬಾಲರಾಜ್ ಅರಸ್ ರಸ್ತೆಯಲ್ಲಿ ತಹಶೀಲ್ದಾರ್ ಜೀಪಿಗೆ ಕಾರು ಚಾಲಕನೊಬ್ಬ ಡಿಕ್ಕಿ ಹೊಟೆದು ಎಸ್ಕೇಪ್ ಆಗಲು ಮುಂದಾಗಿದ್ದಾನೆ.
ತೀರ್ಥಹಳ್ಳಿ ತಹಶೀಲ್ದಾರ್ ರಂಜಿತ್ ಜೀಪ್ ನಲ್ಲಿರುವಾಗಲೇ ಈ ಹೈಡ್ರಾಮ ನಡೆದಿದ್ದು ಎಸ್ಕೆಪ್ ಆಗಲು ಮುಂದಾದ ಕಾರನ್ನು ಬೆನ್ನುಹತ್ತಿದ ತಿರ್ಥಹಳ್ಳಿ ತಹಶಿಲ್ದಾರ್ ಹಾಗೂ ಜೀಪ್ ಚಾಲಕ ಶಿವಮೊಗ್ಗ ಡಿಸಿ ಕಚೇರಿ ಮುಂಭಾಗ ಕಾರನ್ನು ಅಡ್ಡಗಟ್ಟಿದ್ದಾರೆ.
ಮದ್ಯಪಾನ ಅಮಲಿನಲ್ಲಿ ಕಾರು ಚಲಾಯಿಸುತ್ತಿದ್ದ ಶಿಕಾರಿಪುರ ಮೂಲದ ಕಾರು ಚಾಲಕ ಡಿಕ್ಕಿ ಹೊಡೆದ ಬಳಿಕ ಕಾರು ನಿಲ್ಲಿಸದೆ ಶಿಕಾರಿಪುರದತ್ತ ತೆರಳುತ್ತಿದ್ದ.
ಇದನ್ನು ಗಮನಿಸಿ ಚೇಸಿಂಗ್ ಮಾಡಿ ಹಿಡಿದ ತಹಶೀಲ್ದಾರ್ ಹಾಗೂ ಅವರ ಚಾಲಕ ಸ್ಥಳಕ್ಕೆ ಪೋಲಿಸರನ್ನು ಕರೆಸಿದ್ದಾರೆ. ಈ ಸಮಯ ಕುಡಿದ ಅಮಲಿನಲ್ಲಿ ಕಾರು ಚಾಲಕ ಕೆಲಕಾಲ ರಂಪಾಟ ಮಾಡಿದ್ದಾನೆ.

