161
ಶಿವಮೊಗ್ಗ: ಕಾರಿನಲ್ಲಿ ತೆರಳುತ್ತಿದ್ದ ಮಂಗಳೂರಿನ ಕುಟುಂಬವೊಂದು
ಸಾಗರ ತಾಲೂಕಿನ ಆನಂದಪುರ ಸಮೀಪದ ಸಿದ್ದೇಶ್ವರ ಕಾಲೋನಿ ಬಳಿ ತೆರಳುವಾಗ ಕಾರು ಅಪಘಾತವಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಬಳಿ ಕಾರಿನಲ್ಲಿ ತೆರಳುವ ಸಮಯದಲ್ಲಿ ಹಾವೊಂದು ರಸ್ತೆಗೆ ಅಡ್ಡಬಂದಿದೆ ಈ ಸಮಯದಲ್ಲಿ ಹಾವನ್ನು ತಪ್ಪಿಸಲು ಹೋಗಿ ಈ ಅವಘಢ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯಲ್ಲಿದ್ದ ಚರಂಡಿಗೆ ಉರುಳಿ ಬಿದ್ದಿದ್ದೆ.
ಕಾರಿನಲ್ಲಿ ದಂಪತಿ ಜೊತೆ ಮಗು ಸೇರಿದಂತೆ ಒಟ್ಟು ಮೂವರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ, ಹಾವು ಅಡ್ಡಬಂದ ಹಿನ್ನೆಲೆಯಲ್ಲಿ ಅದನ್ನು ತಪ್ಪಿಸಲು ಚಾಲಕ ಪ್ರಯತ್ನಿಸಿದ್ದು
ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರಿಗೂ ಯಾವುದೇ ಸಮಸ್ಯೆಯಾಗಿಲ್ಲ.
ಇನ್ನು ಈ ಘಟನೆಯು
ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

