ಶಿವಮೊಗ್ಗದಲ್ಲಿ ಮಾಜಿ ಎಂ.ಎಲ್.ಸಿ. ಆರ್. ಪ್ರಸನ್ನ ಕುಮಾರ್ ಸುದ್ದಿಗೋಷ್ಠಿ
ಸ್ಬೂಡಾ ಅಧ್ಯಕ್ಷ ಸುಂದರೇಶ್ ಇತ್ತೀಚೆಗೆ ನನ್ನ ಬಗ್ಗೆ ಮಾತನಾಡುವಾಗ “ದಡ್ಡ ಕುರುಬ” ಎಂದು ಹೇಳಿದ್ದಾರೆ.
ನನ್ನ ಬಗ್ಗೆ ಮಾತನಾಡಿದರೆ ನನಗೆ ಬೇಜಾರಿಲ್ಲ ಅದಕ್ಕೆ ನನ್ನ ಪಕ್ಷದವರು ಉತ್ತರ ಕೊಡುತ್ತಾರೆ
ಆದರೆ ದಡ್ಡ ಕುರುಬ ಎಂದು ಜಾತಿ ಹೆಸರೇಳಿ ಸಂಬೋಧಿಸಿದ್ದಾರೆ, ಜಾತಿ ಹೆಸರೇಳಿ ಮಾತನಾಡುವ ಅಗತ್ಯವಿರಲಿಲ್ಲ ಎಂದು ಮಾಜಿ ಜಿಲ್ಲಾಧ್ಯಕ್ಷ ಆರ್ ಪ್ರಸನ್ನ ಕುಮಾರ್ ಹರಿಹಾಯ್ದಿದ್ದಾರೆ.
ಹಾಗಾಗಿ ಅವರು ಆಡಿದ ಮಾತಿಗೆ ನನ್ನ ಸಮಾಜದ ಕ್ಷಮೆ ಕೇಳಬೇಕು
ಇಲ್ಲದಿದ್ದರೆ ಅವರಿಗೆ ಸೂಕ್ತ ಸಮಯದಲ್ಲಿ ನನ್ನ ಸಮಾಜದವರು ಉತ್ತರ ನೀಡಲಿದ್ದಾರೆ. ಅವರಿಗೆ ಆತ್ಮ ಸಾಕ್ಷಿಯಿದ್ದರೆ ಕ್ಷಮೆ ಕೇಳಬೇಕು,
ಅವರೂ ನನ್ನ ಸ್ನೇಹಿತರೇ, ಅದರೆ ಏಕೆ ಹೀಗೆ ಮಾತನಾಡುತ್ತಿದ್ದಾರೆ ಎಂದು ಗೊತ್ತಿಲ್ಲ ಅದೇ ರೀತಿ ಪಕ್ಷದ ವ್ಯವಸ್ಥೆಯ ಬಗ್ಗೆಯೂ ಮಾತನಾಡಿದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದಂತೆ ನಾನು ಕೇಳುತ್ತೇನೆ ಎಂದು ಹೇಳಿದ್ದಾರೆ, ಮಧುಬಂಗಾರಪ್ಪ ಶಿವಮೊಗ್ಗ ಉಸ್ತುವಾರಿ ಸಚಿವರು. ಅವರೊಂದಿಗೆ ಸೇರಿ ಕೆಲಸ ಮಾಡಬೇಕಾದದ್ದು ನನ್ನ ಕರ್ತವ್ಯ
ಅದರ ಹೊರತಾಗಿ ಬೇರೇನೂ ಇಲ್ಲ.
ತಾವು ಅನುಭವಿಸಿದ್ದ ಹುದ್ದೆಯನ್ನೆ ಕಿತ್ತು ಹೋದ ಹುದ್ದೆ ಎಂದಿದ್ದಾರೆ ಮೂರುವರೆ ವರ್ಷದಿಂದ ಸೂಡಾ ಅಧ್ಯಕ್ಷನಾಗಿ ಅಧಿಕಾರ ಅನುಭವಿಸಿದ್ದಾರಲ್ಲ ?
ಅಧ್ಯಕ್ಷರಾಗಿ ಏನೇನು ಮಾಡಿದ್ದಾರೆ ಎಂದು ಗೊತ್ತಿದೆ
ಪಕ್ಷದ ಹಿರಿಯರಾದ ಬಿ.ವಿ.ಶ್ರೀನಿವಾಸ್, ಮಂಜುನಾಥ ಭಂಡಾರಿ, ಕಿಮ್ಮನೆ ರತ್ನಾಕರ್ ಸೇರಿದಂತೆ ಅನೇಕರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ
ಈ ಮೂಲಕ ಪಕ್ಷದಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಪಕ್ಷ ಈಗಾಗಲೇ ಅವರಿಗೆ ಶೊಕಾಸ್ ನೋಟಿಸ್ ನೀಡಿದೆ
ಅದಕ್ಕೆ ಅವರು ಏನು ಉತ್ತರ ಕೊಡುತ್ತಾರೋ ನೋಡೋಣ ಎಂದ ಪ್ರಸನ್ನ ಕುಮಾರ್ ಹೆಚ್.ಎಸ್. ಸುಂದರೇಶ್ ವಿರುದ್ಧ ಹರಿಹಾಯ್ದಿದ್ದಾರೆ.

