Home ರಾಜಕೀಯ ಬಿಜೆಪಿ ಭದ್ರಕೋಟೆಯಲ್ಲಿ ಕೈ ಪಡೆಯಿಂದ ಭಾರತ್ ಜೋಡೋ-2 – ಚಾಲನೆ ನೀಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್

ಬಿಜೆಪಿ ಭದ್ರಕೋಟೆಯಲ್ಲಿ ಕೈ ಪಡೆಯಿಂದ ಭಾರತ್ ಜೋಡೋ-2 – ಚಾಲನೆ ನೀಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್

by Mahesh malenaadu

 

ಶಿಕಾರಿಪುರ: ಬಿಜೆಪಿ ಭದ್ರಕೋಟೆ ಶಿವಮೊಗ್ಗದಲ್ಲಿ ಕೈ ಪಡೆ ಶಿಕಾರಿ ನಡೆಸಿದೆ. ಭಾರತ್ ಜೋಡೋ-2 ಹೆಸರಿನಲ್ಲಿ ಇಂದಿನಿಂದ ಪಾದಯಾತ್ರೆ ಆರಂಭಿಸಿದೆ. ಈ ಭಾರತ್ ಜೋಡೋ-2 ಗೆ ಚಾಲನೆ ನೀಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್, ಶಿಕಾರಿಪುರದ ಕಿಟ್ಟದಹಳ್ಳಿಯಿಂದ ಪಾದಯಾತ್ರೆ ಆರಂಭಿಸಿದ್ದಾರೆ. ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಇದಕ್ಕೆ ಕೈ ಜೋಡಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತವರು ಕ್ಷೇತ್ರದಿಂದಲೇ ಕಾಂಗ್ರೆಸ್ ಆಖಾಡಕ್ಕಿಳಿದಿದೆ.

ಬಿಜೆಪಿ ಭದ್ರಕೋಟೆಯಾಗಿರುವ ಮಲೆನಾಡು ಜಿಲ್ಲೆ ಶಿವಮೊಗ್ಗದ ಶಿಕಾರಿಪುರದಲ್ಲೇ ಭಾರತ್ ಜೋಡೋ -2 ಗೆ ಕಯ ಪಡೆ ಇದೀಗ ಚಾಲನೆ ನೀಡಿದೆ. ಈ ಬಿಜೆಪಿಗೆ ಕೌಂಟರ್ ನೀಡಲು ಕೈ ಪಡೆ ಮುಂದಾಗಿದ್ದು, ವಿಜಯೇಂದ್ರ ಕ್ಷೇತ್ರ ಶಿಕಾರಿಪುರವನ್ನೇ ಮೊದಲ ಟಾರ್ಗೆಟ್ ಮಾಡಿದೆ. ಅಂದಹಾಗೆ, ಬಿಜೆಪಿಯ ಬಳ್ಳಾರಿ ಚಲೋ ಪಾದಯಾತ್ರೆಗೆ ಟಕ್ಕರ್ ನೀಡಲು ವಿಜಯೇಂದ್ರ ಕ್ಷೇತ್ರದಿಂದಲೇ ಭಾರತ್ ಜೋಡೋ-2 ಗೆ ಚಾಲನೆ ನೀಡಲಾಗಿದ್ದು, ಇಂದು ಬೆಳಿಗ್ಗೆ ಶಿಕಾರಿಪುರದ ಈಸೂರಿನ ಹುತಾತ್ಮರ ಸ್ಥಳದಲ್ಲಿ ಪುಷ್ಪಾರ್ಚನೆ ನೆರವೇರಿಸುವುದರ ಮೂಲಕ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಈ ಪಾದಯಾತ್ರೆಗೆ ಚಾಲನೆ ನೀಡಿದ್ರು. ಇಲ್ಲಿನ ಕಿಟ್ಟದಹಳ್ಳಿಯಲ್ಲಿ ಮೊದಲಿಗೆ ತ್ರಿವರ್ಣ ಧ್ವಜ ಹಾರಿಸಿ ರಾಷ್ಟ್ರಗೀತೆ, ವಂದೇ ಮಾತರಂ ಗೀತೆಯನ್ನು ಹಾಡಿದ ಬಳಿಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು.

ಮೊದಲ ಹಂತದ 84 ಕ್ಷೇತ್ರಗಳಿಗೆ ಶಿವಮೊಗ್ಗದ ಶಿಕಾರಿಪುರದಿಂದಲೇ ಮುನ್ನುಡಿ ಬರೆಯಲಾಗಿದ್ದು, ಪಾದಯಾತ್ರೆಯಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ರು. ಪಾದಯಾತ್ರೆಯುದ್ದಕ್ಕೂ ಕಾಂಗ್ರೆಸ್ ಹಾಗೂ ತಮ್ಮ ನಾಯಕರ ಪರ ಕಾರ್ಯಕರ್ತರು, ಘೋಷಣೆಗಳನ್ನ ಕೂಗಿದ್ರು, ಪಾದಯಾತ್ರೆಯಲ್ಲಿ ಕೆಪಿಸಿಸಿ ಸಾರಥಿ ಬಿ.ಕೆ. ಹರಿಪ್ರಸಾದ್ ಗೆ ಸಚಿವರಾದ ಯತೀಂದ್ರ ಸಿದ್ದರಾಮಯ್ಯ, ಬಸವತಂಪ್ಪ, ಎಂ ಎಲ್ ಸಿ ಗಳಾದ ಮಂಜುನಾಥ್ ಭಂಡಾರಿ, ಬಲ್ಕೀಶ್ ಬಾನು ಸೇರಿದಂತೆ ಅನೇಕ ಜನಪ್ರತಿನಿಧಿಗಳು ಸಾಥ್ ನೀಡಿದ್ರು. ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್, ಎಸ್.ಐ.ಆರ್. ಮೂಲಕ ದೇಶದಲ್ಲಿ ಬಿಜೆಪಿ ಮಾಡಿರುವ ದ್ರೋಹದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಸೆ. 30 ಕ್ಕೆ ನಮ್ಮ ದೇಶದಲ್ಲಿ ಭಾರತ್ ಜೋಡೋ ಯಾತ್ರೆಗೆ ನಾಲ್ಕು ವರ್ಷಗಳು ಸಂದಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸೋತಿರುವ 84 ಕ್ಷೇತ್ರಗಳ ಪೈಕಿ 69 ಕ್ಷೇತ್ರದಲ್ಲಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದೆವೆ. ಕಾಂಗ್ರೆಸ್ ಗೆಲ್ಲುವುದು ಸೇರಿದಂತೆ ಪ್ರಜಾಪ್ರಭುತ್ವಕ್ಕೆ ಉಂಟು ಮಾಡಿರುವ ಬಿಜೆಪಿ ಕ್ಷೇತ್ರಗಳಲ್ಲಿ ಈ ಯಾತ್ರೆ ನಡೆಸಲಾಗುತ್ತಿದೆ ಎಂದರು. ಬಳ್ಳಾರಿ ಪಾದಯಾತ್ರೆಗೆ ವಿರುದ್ಧವಾಗಿ ನಾವು ಪಾದಯಾತ್ರೆ ನಡೆಸುತ್ತಿಲ್ಲ. ಆರ್.ಟಿ.ಜಿ.ಎಸ್. ಮೂಲಕ ಭ್ರಷ್ಟಾಚಾರ ಮಾಡಿರುವ ಏಕೈಕ ವ್ಯಕ್ತಿ ಎಂದರೆ ಅದು ಶಿಕಾರಿಪುರ ಶಾಸಕ ವಿಜಯೇಂದ್ರ ಅವರು, ಅವರಪ್ಪನ ಹೆಸರಿನಲ್ಲಿ ಲಂಚ ಸ್ವೀಕಾರ ಮಾಡಿದ ಏಕೈಕ ವ್ಯಕ್ತಿ ಅದು ಯತೀಂದ್ರ ಯಡಿಯೂರಪ್ಪ. ಅಲ್ಲಾಲ್ಲಾ ವಿಜಯೇಂದ್ರ ಯಡಿಯೂರಪ್ಪ ಎಂದು ತಮ್ಮ ತಪ್ಪು ಹೇಳಿಕೆ ಸರಿಪಡಿಸಿಕೊಂಡು ಹರಿಹಾಯ್ದರು.

ಇದಕ್ಕೂ ಮುನ್ನವೇ ಬಿಜೆಪಿಗೆ ತಳಮಳ ಶುರುವಾಯ್ತಾ ಅಂತಾ ಹರಿಪ್ರಸಾದ್ ಪ್ರಶ್ನಿಸಿದ್ರು. ಪಾದಯಾತ್ರೆ ಮಾರ್ಗದಲ್ಲಿ ಕಟ್ಟಿದ್ದ ಕಾಂಗ್ರೆಸ್ ಬಾವುಟಗಳನ್ನು ಬಿಜೆಪಿ ಕಾರ್ಯಕರ್ತರು ಕಿತ್ತೆಸೆದಿದ್ದಾರೆಂದು ಬಿ.ಕೆ. ಹರಿಪ್ರಸಾದ್ ಹರಿಹಾಯ್ದ್ರು. ಬಿ.ವೈ. ವಿಜಯೇಂದ್ರಗೆ ತವರಿನಲ್ಲೇ ರಾಜಕೀಯ ಭೀತಿ ಶುರುವಾಯ್ತಾ ಅಂತಾ ಕಿಡಿಕಾರಿದ್ರು.

ಕಿಟ್ಟದಹಳ್ಳಿಯಿಂದ ಶುರುವಾದ ಪಾದಯಾತ್ರೆಯು ಮಟ್ಟಿಕೋಟೆ, ಹೊಸನಗರ ಕ್ರಾಸ್ ಹಾಗೂ ನೆಲವಾಗಿಲು ಕ್ರಾಸ್ ಮೂಲಕ ಸಾಗಿ ಶಿಕಾರಿಪುರ ಪಟ್ಟಣದ ಸಂತೆ ಮೈದಾನ ಸೇರಿತು. ಅಲ್ಲಿ ಬಹಿರಂಗ ಸಭೆ ನಡೆಯಿತು. ಒಟ್ಟು 9 ಕಿಲೋಮೀಟರ್ ದೂರ ಪಾದಯಾತ್ರೆಯು ಸಾಗಿ ಬಂದಿತು. ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ಕಾಂಗ್ರೆಸ್ ಬಾವುಟ ಹಿಡಿದು, ಘೋಷಣೆ ಕೂಗುತ್ತಾ ಸಾಗಿ ಬಂದರು. ಪಾದಯಾತ್ರೆ ಸಾಗಿ ಬಂದ ದಾರಿಯುದ್ದಕ್ಕೂ ಕಾಂಗ್ರೆಸ್ ಬಾವುಟ, ಬ್ಯಾನರ್ ಗಳನ್ನು ಹಾಕಲಾಗಿತ್ತು. ಭಾರತ್ ಜೋಡೋ ಕುರಿತು ರಚಿಸಿದ ಹಾಡುಗಳು ಮಾರ್ಧನಿಸಿದವು.

ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸಿದ್ದ ಭಾರತ್ ಜೋಡೋ ಯಾತ್ರೆಯ ಆಶಯಗಳನ್ನು ಮುಂದುವರೆಸಿಕೊಂಡು ಹೋಗಬೇಕು, ಸರ್ಕಾರದ ಗ್ಯಾರೆಂಟಿ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಬೇಕು. ಆ ಮೂಲಕ ಜನರೊಂದಿಗೆ ನೇರ ಸಂಪರ್ಕ ಹೊಂದಬೇಕೆನ್ನುವ ಉದ್ದೇಶದೊಂದಿಗೆ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಇದೇ ವೇದಿಕೆಯನ್ನೇ ಬಿಜೆಪಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ, ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಲು ಬಳಕೆಯಾಯ್ತು.

ಒಟ್ಟಾರೆ, ಬಿಜೆಪಿ ಭದ್ರಕೋಟೆ, ಬಿಜೆಪಿ ರಾಜ್ಯಾಧ್ಯಕ್ಷ, ಶಿಕಾರಿಪುರ ಶಾಸಕ ವಿಜಯೇಂದ್ರ ತವರು ಕ್ಷೇತ್ರದಿಂದಲೇ ಕಾಂಗ್ರೆಸ್ ಆಖಾಡಕ್ಕಿಳಿದಿದೆ. ಈ ಮೂಲಕ ಮುಂದಿನ ಒಂದುವರೆ ವರ್ಷದ ಬಳಿಕ ಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಆರಂಭವನ್ನೇ ನೀಡಿದಂತಾಗಿದೆ.

Spread the love

You may also like

Leave a Comment