Home Uncategorized ಬ್ರೇಕ್ ಫೇಲ್ ಆಗಿ ಮರಕ್ಕೆ ಡಿಕ್ಕಿ ಹೊಡೆದ ಓಮಿನಿ ಕಾರು. ಗಾಯಾಳುಗಳ ರಕ್ಷಣೆಗೆ ನಿಂತ ಶೃಂಗೇರಿ ಶಾಸಕ ಟಿ.ವಿ. ರಾಜೇಗೌಡ!

ಬ್ರೇಕ್ ಫೇಲ್ ಆಗಿ ಮರಕ್ಕೆ ಡಿಕ್ಕಿ ಹೊಡೆದ ಓಮಿನಿ ಕಾರು. ಗಾಯಾಳುಗಳ ರಕ್ಷಣೆಗೆ ನಿಂತ ಶೃಂಗೇರಿ ಶಾಸಕ ಟಿ.ವಿ. ರಾಜೇಗೌಡ!

by Mahesh malenaadu

ಸಾಗರ ತಾಲೂಕಿನ ಹುಲಿ ದೇವರಬವನ ಗ್ರಾಮದ ಸಮೀಪ ನಿನ್ನೆ ಶನಿವಾರ ರಾತ್ರಿ ರಸ್ತೆ ಅಪಘಾತವೊಂದು ಸಂಭವಿಸಿದೆ.

ಈ ವೇಳೆ ಶೃಂಗೇರಿ ಕ್ಷೇತ್ರದ ಶಾಸಕ ಟಿ.ವಿ. ರಾಜೇಗೌಡ ತಕ್ಷಣ ಸ್ಪಂದಸಿ ಮಾನವೀಯತೆ ಮೆರೆದಿದ್ದಾರೆ.

ತುಮರಿ ಗ್ರಾಮದಲ್ಲಿ ನಡೆದ ಖಾಸಗಿ ಕಾರ್ಯಕ್ರಮ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿ ಓಮಿನಿ ಕಾರು ಬ್ರೇಕ್ ಫೇಲ್ ಆದ ಕಾರಣ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿಹೊಡೆದಿದೆ, ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ,

ತಕ್ಷಣವೇ ಗಾಯಾಳುಗಳ ರಕ್ಷಣೆಗೆ ರಸ್ತೆಯಲ್ಲಿ ಸಾಗುತ್ತಿದ್ದ ಸಾರ್ವಜನಿಕರು ಮುಂದಾಗಿದ್ದಾರೆ, ಅದೇ ಮಾರ್ಗವಾಗಿ ಆಗಮಿಸುತ್ತಿದ್ದ ಶಾಸಕ ಟಿ.ವಿ. ರಾಜೇಗೌಡ
ತಮ್ಮ ವಾಹನವನ್ನು ತಕ್ಷಣ ನಿಲ್ಲಿಸಿ ಅಪಘಾತ ಸ್ಥಳಕ್ಕೆ ದೌಡಾಯಿಸಿ ಸಹಾಯಕ್ಕೆ ಮುಂದಾಗಿದ್ದಾರೆ.

ಸ್ಥಲಕ್ಕೆ ಅಂಬುಲೆನ್ಸ್ ಬರುವುದು ತಡವಾಗುವುದನ್ನು ಮನಗಂಡ ಶಾಸಕ ರಾಜೇಗೌಡ ತಮ್ಮ ಬೆಂಗಾವಲು ವಾಹನದಲ್ಲೇ ಗಾಯಾಳುಗಳನ್ನು ಆಂಬ್ಯಲೆನ್ಸ್ ಬರುವ ಮಾರ್ಗದ ವರೆಗು ಸುರಕ್ಷಿತವಾಗಿ ಕರೆತಂದು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ.

ಕ್ಷೇತ್ರ ಯಾವುದೇ ಇರಲಿ, ಮಾನವೀಯತೆಗೆ ಸ್ಥಳ ಮುಖ್ಯವಲ್ಲ ಎಂದು ಸಾಬೀತುಪಡಿಸಿದ ಶಾಸಕರು ರಾಜಕೀಯ ಮೀರಿದ ಮಾನವೀಯ ಮೌಲ್ಯಕ್ಕೆ ಸಾಕ್ಷಿಯಾಗಿದ್ದಾರೆ.

Spread the love

You may also like

Leave a Comment