Home ರಾಜಕೀಯ ಸಾಗರದಲ್ಲಿ ಜೋರಾಯ್ತು ಬಾವಿ ಪಾಲಿಟಿಕ್ಸ್- ನನಗೂ ಈ ಬಾವಿಗೂ ಸಂಬಂಧವಿಲ್ಲ ಎಂದ ಸಾಗರ ಶಾಸಕ ಬೇಳೂರು

ಸಾಗರದಲ್ಲಿ ಜೋರಾಯ್ತು ಬಾವಿ ಪಾಲಿಟಿಕ್ಸ್- ನನಗೂ ಈ ಬಾವಿಗೂ ಸಂಬಂಧವಿಲ್ಲ ಎಂದ ಸಾಗರ ಶಾಸಕ ಬೇಳೂರು

by Mahesh malenaadu

ಸಾಗರ:ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಮನೆಯ ಪಕ್ಕದಲ್ಲಿರುವ ಸಾಗರ ನಗರಸಭೆಯ 18ನೇ ವಾರ್ಡ್ ಗಾಂಧಿನಗರದಲ್ಲಿನ ಸ್ವಾಮಿ ವಿವೇಕಾನಂದ ಗ್ರಂಥಾಲಯ ಆವರಣದಲ್ಲಿದ್ದ ಸಾರ್ವಜನಿಕ ಬಾವಿ, ಇದು ಸಾಗರ ನಗರಸಭೆ ಬಾವಿ ಅಲ್ಲ ಎಂದು ಬೇಳೂರು ಗೋಪಾಲಕೃಷ್ಣ ಸ್ಪಷ್ಟನೆ ನೀಡಿದ್ದಾರೆ.

ಸುಮಾರು 40 ವರ್ಷದಿಂದ ಬಳಕೆಯಲ್ಲಿದ್ದ ಗ್ರಂಥಾಲಯದ ಬಾವಿ ಗಾಂಧಿನಗರ ನಿವಾಸಿಗಳಿಗೆ ಆಧಾರವಾಗಿತ್ತು, ಮಾಜಿ ಶಾಸಕರು ದಾಖಲೆ ಪ್ರಕಾರ ಸರ್ಕಾರಿ ಬಾವಿ ಎನ್ನುತ್ತಿರುವುದಕ್ಕೆ ಸ್ಪಷ್ಟನೆ ನೀಡಲಾಗಿದೆ
ಸರ್ಕಾರಿ ಬಾವಿ ಅಲ್ಲ ಎನ್ನುವುದಕ್ಕೆ ತಮ್ಮಬಳಿ ಸಾಕ್ಷಿ ಇದೆ ಎಂದು ಬೇಳುರು ತಿಳಿದ್ದಾರೆ.

ಸಾಮಾನ್ಯ ಶಾಸಕನಾಗಿ ಬಾವಿ ಮುಚ್ಚುವ ಕೆಲಸ ನಾನು ಮಾಡುವುದಿಲ್ಲ, ಬಾವಿ ಮುಚ್ಚುವ ಮೊದಲು ಮತ್ತೊಂದು ಬಾವಿ ತೆಗೆಸಲಾಗಿದೆ ಈ ವಿಷಯದಲ್ಲಿ ನನ್ನ ಮೇಲೆ ಅಪಪ್ರಚಾರ ಮಾಡುವ ಕೆಲಸವಾಗುತ್ತಿದೆ,
ಎರಡ್ಮೂರು ಬಾರಿ ನನ್ನ ವಿರುದ್ಧ ಮಾಜಿ ಶಾಸಕ ಹರತಾಳು ಹಾಲಪ್ಪ ಅಪವಾದ ಮೂಡುವಂತೆ ಮಾಡಿದ್ದಾರೆ ರಾಜಕೀಯವಾಗಿಸಲು ನಮ್ಮ ಮನೆ ಬಳಿ ಬಂದು ಪ್ರತಿಭಟಿಸಿದ್ದಾರೆ ಎಂದು ಹರತಾಳು ಹಾಲಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಬೇಳೂರು ಗೋಪಾಲಕೃಷ್ಣ

ಹಾಲಪ್ಪ ಇತಿಹಾಸವಿರುವ ಕೆರೆಯನ್ನೇ ಒತ್ತುವರಿ ಮಾಡಿದ್ದಾರೆ
ಅಂತಹವರು ನಾನು ಬಾವಿ ಮುಚ್ಚುವ ಕೆಲಸ ಮಾಡಿದ್ದೆನೆ ಎಂದು ಆರೋಪಿಸುತ್ತಿದ್ದಾರೆ
ನಾನು ಮಾಜಿ ಶಾಸಕ ಹರತಾಳು ಹಾಲಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿದ್ದೆನೆ

ಚುನಾವಣೆ ಬರುತ್ತಿರುವುದಕ್ಕೆ ಗುರುತಿಸಿಕೊಳ್ಳಲು ಈ ರೀತಿಯ ಕುತಂತ್ರ ಮಾಮಾಡಿದ್ದಾರೆ
ಈ ವಿಚಾರವಾಗಿ 4 ಜನರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದ ಶಾಸಕ ಬೇಳೂರು ಗೋಪಾಲಕೃಷ್ಣ

Spread the love

You may also like

Leave a Comment