27
ಶಿವಮೊಗ್ಗ: ನಗರದ ಪುಟ್ಟಪ್ಪನ ಕ್ಯಾಂಪ್ ಸಮೀಪ ತುಂಗಾನದಿಯಲ್ಲಿ 20 ವರ್ಷದ ಫೈಜಾನ್ ಹಾಗೂ 25 ವರ್ಷದ ಯಾಸಿನ್ ಅಫರಾಜ್, ಇಬ್ಬರು ಈಜಲು ತೆರಳಿದ್ದಾರೆ.
ಬುದವಾರ ಸಂಜೆ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರ ಪೈಕಿ ಫೈಜಾನ್ (20) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ದಡಕ್ಕೆ ಸುರಕ್ಷಿತವಾಗಿ ಮರಳಿದ್ದ ಇನ್ನೋರ್ವ ಯುವಕ ಯಾಸಿನ್ ಅರಾಫತ್ (25), ತಕ್ಷಣವೇ ಸ್ಥಳೀಯರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ನದಿಯಲ್ಲಿ ಮುಳುಗಿದ್ದ ಫೈಜಾನ್ ಗಾಗಿ ತುಂಗಾ ನದಿಯಲ್ಲಿ ಅಗ್ನಿಶಾಮಕ ದಳ ಹಾಗೂ ಸ್ಥಳೀಯರಿಂದ ತೀವ್ರ ಶೋಧಕಾರ್ಯ ನಡೆಸಲಾಗಿದೆ.
ನಂತರ ಸ್ಥಲಕ್ಕೆ ಬಂದ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ತಂಡದಿಂದಲೂ ತೀವ್ರ ಹುಡುಕಾಟ ನಡೆಸಲಾಗಿದೆ,
ನಿರಂತರ ಶೋಧದ ಬಳಿಕ ಫೈಜಾನ್ ಶವ ಪತ್ತೆಯಾಗಿದ್ದು ಮರಣೋತ್ತರ ಪರೀಕ್ಷೆಗೆ ಶವಗಾರಕ್ಕೆ ರವಾನೆ ಮಾಡಲಾಗಿದೆ. ಘಟನೆ ಕುರಿತು
ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

