24
ಶಿವಮೊಗ್ಗ: ಮಲೆನಾಡಿನ ಸಾಂಸ್ಕೃತಿಕ ಶಿವಮೊಗ್ಗ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಗೆ ಸ್ವಾಗತ ಪೂಜೆ ಸಲ್ಲಿಸಿ ಸ್ವಾಗತಿಸಿದ ಶಾಸಕ ಚನ್ನಬಸಪ್ಪ ಹಾಗೂ ಪಾಲಿಕೆ ಅಧಿಕಾರಿಗಳು
ದಸರಾ ಮೆರವಣಿಗೆಯಲ್ಲಿ ತಾಯಿ ಶ್ರೀ ಚಾಮುಂಡೇಶ್ವರಿ ಮೂರ್ತಿ ಅಂಬಾರಿಯನ್ನು ಹೊರಲು ಗಜಪಡೆಗೆ ಹಣ್ಣು-ಹಂಪಲುಗಳನ್ನು ನೀಡಿ ಪೂಜೆ ಸಲ್ಲಿಸಿದ ಶಾಸಕ ಯಾವುದೇ ಲೋಪವಿಲ್ಲದೆ ಉತ್ಸವ ಅತ್ಯಂತ ವೈಭವ ಹಾಗೂ ಶಿಸ್ತುಬದ್ಧವಾಗಿ ನೆರವೇರಲು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಆನೆಗಳ ಆರೋಗ್ಯ ತಪಾಸಣೆ, ಪೌಷ್ಟಿಕ ಆಹಾರ ಪೂರೈಕೆ ಹಾಗೂ ನಗರದಲ್ಲಿ ನಡೆಯಲಿರುವ ತಾಲೀಮಿನ ಕುರಿತು ಅಧಿಕಾರಿಗಳು ಮತ್ತು ಮಾವುತರೊಂದಿಗೆ ಚರ್ಚಿಸಿದ ಶಾಸಕ ಚನ್ನಬಸಪ್ಪ.
ಈ ವೇಳೆ ಪಾಲಿಕೆ ಆಯುಕ್ತ ಮಾಯಣ್ಣಗೌಡ, ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನಕೃಷ್ಣ ಪಟೇಗಾರ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಜಗದೀಶ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

