Home ರಾಜಕೀಯ ಸ್ಟಿಂಗ್ ಆಪರೇಷನ್ ಪಿತಾಮಹರು ಆರ್.ಎಸ್.ಎಸ್. ನವರು : ಬಿ.ಕೆ. ಹರಿಪ್ರಸಾದ್

ಸ್ಟಿಂಗ್ ಆಪರೇಷನ್ ಪಿತಾಮಹರು ಆರ್.ಎಸ್.ಎಸ್. ನವರು : ಬಿ.ಕೆ. ಹರಿಪ್ರಸಾದ್

by Mahesh malenaadu

ಶಿವಮೊಗ್ಗ: ಸ್ಟಿಂಗ್ ಆಪರೇಷನ್ ಮೂಲ ಹಾಗೂ ಆಧುನಿಕ ಭಾರತದಲ್ಲಿ ಇದರ ಪಿತಾಮಹ ಯಾರೆಂದರೆ ಆರ್‌ಎಸ್‌ಎಸ್‌ನವರು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಸ್ಟಿಂಗ್ ಆಪರೇಷನ್ ಎಂಬ ಕೃತ್ಯ ಈಗೀನಿಂದ ರೂಪಗೊಂಡಿರುವುದಲ್ಲ. ಕಿತ್ತೂರಿನಿಂದ ಹಿಡಿದು ಹಾಗೂ ದೇವೇಂದ್ರಪ್ಪ ಕಾಳಪ್ಪನವರಿದಂದ ಹಿಡಿದು ಬಹಳಷ್ಟು ಜನ ರಾಜಕೀಯ ಸೇಡನ್ನು ತಿರಿಸಿಕೊಳ್ಳಲು ಇದನ್ನು ಮಾಡುತ್ತಾ ಬಂದಿದ್ದಾರೆ. ಆದರೆ ಸ್ಟಿಂಗ್ ಆಪರೇಷನ್ ಮೂಲ ಹಾಗೂ ಆಧುನಿಕ ಭಾರತದಲ್ಲಿ ಇದರ ಪಿತಾಮಹ ಯಾರೆಂದರೆ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಗುಜರಾತ್ ಉಸ್ತುವಾರಿಯಾಗಿದ್ದ ಸಂಜಯ್ ಜೋಷಿ. ಸ್ಟಿಂಗ್ ಆಪರೇಷನ್ ಎಂಬ ಸಂಪ್ರದಾಯದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದಿದ್ದಾರೆ.

ಗಾಂಧಿಜಿಯವರು ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ ಎಂದ ಹರಿಪ್ರಸಾದ್, ಮಹಾತ್ಮ ಗಾಂಧಿಯನ್ನು ಕೊಂದಿರುವ ಸಂಘಟನೆಗಳು ದೇಶದ ಮೊಟ್ಟ ಮೊದಲು ಭಯೋತಾದಕ ಸಂಘಟನೆ ಹಾಗೂ ಅವರನ್ನು ಕೊಲೆ ಮಾಡಿ ನಾಥುರಾಮ್ ಗೋಡ್ಸೆ ಸ್ವಾತಂತ್ರ ಭಾರತದ ಮೊಟ್ಟ ಮೊದಲ ಭಯೋತ್ಪಾದಕ. ಬಿಜೆಪಿ ಅವರು ನಿಜವಾದ ದೇಶಭಕ್ತರಾಗಿದ್ದರೆ. ಸ್ವಾತಂತ್ರ ಹೋರಾಟ, ತ್ರಿವರ್ಣ ಧ್ವಜ ಹಾಗೂ ಭಾರತ ದೇಶದ ಮೇಲೆ ನಂಬಿಕೆ ಇದ್ದರೆ ಇದನ್ನು ಒಪ್ಪಿಕೊಳ್ಳಬೇಕು ಎಂದಿದ್ದಾರೆ.

Spread the love

You may also like

Leave a Comment