378
ಶಿವಮೊಗ್ಗ:ಕಳೆದ ಐದು ವರ್ಷಗಳಿಂದ ತೀವ್ರ ಸಾಲದ ಸುಳಿಯಲ್ಲಿ ಸಿಲುಕಿದ್ದ ಕ್ರಷರ್ ಉದ್ಯಮಿಯೊಬ್ಬರು ನಗರದ ಹೊಟೇಲ್ ಒಂದರ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.
ಗೋಪಾಳ ಬಡಾವಣೆಯ ನಿವಾಸಿ ನವೀನ್ ಕುಮಾರ್ ಬಳಗಾರ್ ಅಲಿಯಾಸ್ ಬಸವರಾಜ್ (42) ಮೃತಪಟ್ಟ ಕ್ರಷರ್ ಉದ್ಯಮಿ.
ಉದ್ಯಮದಲ್ಲಿ ಉಂಟಾಗಿದ್ದ ನಷ್ಟ ಹಾಗೂ ವಿಪರೀತ ಸಾಲದ ಹೊರೆಯಿಂದಾಗಿ ಮನನೊಂದಿದ್ದ ನವೀನ್ ಕುಮಾರ್, ನಗರದ ಹೊಟೇಲ್‌ವೊಂದರಲ್ಲಿ ಕೊಠಡಿ ಬಾಡಿಗೆಗೆ ಪಡೆದುಕೊಂಡು ಅಲ್ಲಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

