Home ಅಪರಾಧ ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಶಿವಮೊಗ್ಗದಲ್ಲಿ ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ

ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಶಿವಮೊಗ್ಗದಲ್ಲಿ ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ

by Mahesh malenaadu

​ಶಿವಮೊಗ್ಗ : ನಕಲಿ ಸರ್ಕಾರಿ ದಾಖಲೆ, ಸ್ಟ್ಯಾಂಪ್ ಹಾಗೂ ವಿವಿಧ ಕಚೇರಿಗಳ ಮೊಹರುಗಳನ್ನು ಸೃಷ್ಟಿಸಿ ವಂಚಿಸುತ್ತಿದ್ದ ಆರೋಪಿಗೆ ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 17,000 ದಂಡ ವಿಧಿಸಿ ಆದೇಶಿಸಿದೆ.

​ನಗರದ ಎ.ಎನ್.ಕೆ. ರಸ್ತೆಯ ‘ಇಮೇಜ್ ಟೆಕ್ನಾಲಜೀಸ್’ ಕಂಪ್ಯೂಟರ್ ಅಂಗಡಿಯ ವಿಷ್ಣುಭಕ್ತ ಶಿಕ್ಷೆಗೆ ಗುರಿಯಾದ ಆರೋಪಿ. ಈತ ಮೋಸದ ಉದ್ದೇಶದಿಂದ ನಕಲಿ ದಾಖಲೆ ಹಾಗೂ ಮೊಹರುಗಳನ್ನು ತಯಾರಿಸಿ, ಬ್ಯಾಂಕ್ ಮತ್ತು ಸರ್ಕಾರಿ ಕಚೇರಿಗಳಿಗೆ ಸಲ್ಲಿಸಿ ವಂಚಿಸುತ್ತಿದ್ದ. ಈ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
​ಡಿವೈಎಸ್‌ಪಿ ಪ್ರಶಾಂತ್‌ ಮುನ್ನೊಳಿ ಅವರು ತನಿಖೆ ಪೂರ್ಣಗೊಳಿಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕಿ ಮಮತಾ ಬಿ.ಎಸ್. ವಾದ ಮಂಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಯಶವಂತ ಕುಮಾರ್ ಅವರು ಈ ಮಹತ್ವದ ತೀರ್ಪು ನೀಡಿದ್ದಾರೆ.

Spread the love

You may also like

Leave a Comment