Home ಅಪರಾಧ ಸಾಗರ ತಹಶೀಲ್ದಾರ್ ಡಾ.ಪ್ರತಿಭಾ ಆರ್ ಅವರಿಂದ ಮುಂದುವರಿದ ಒತ್ತುವರಿ ತೆರವು ಕಾರ್ಯಾಚರಣೆ.

ಸಾಗರ ತಹಶೀಲ್ದಾರ್ ಡಾ.ಪ್ರತಿಭಾ ಆರ್ ಅವರಿಂದ ಮುಂದುವರಿದ ಒತ್ತುವರಿ ತೆರವು ಕಾರ್ಯಾಚರಣೆ.

by Mahesh malenaadu

ಸಾಗರ: ಶಿವಮೊಗ್ಗ ಜಿಲ್ಲೆ  ಸಾಗರ ತಾಲೂಕಿನ ಬಾರಂಗಿ ಹೋಬಳಿ ಭಾನುಕುಳಿ ಗ್ರಾಮದ ಸರ್ವೇ ನಂಬರ್ 44 ರಲ್ಲಿ 1 ಎಕರೆಗೂ ಹೆಚ್ಚು ಸರ್ಕಾರಿ ಜಮೀನು ತೆರವು ಗೊಳಿಸಲಾಯಿತು, ​ಒತ್ತುವರಿ ಜಾಗದಲ್ಲಿದ್ದ ಕಬ್ಬಿಣದ ಗೇಟನ್ನು ಜೆಸಿಬಿ ಮೂಲಕ ಧ್ವಂಸ ಗೊಳಿಸಲಾಯಿತು.

ಈ ತೆರವು ಕಾರ್ಯಾಚರಣೆಯಿಂದ ಕೋಟ್ಯಂತರ ಮೌಲ್ಯದ ಸರ್ಕಾರಿ ಭೂಮಿ ವಶಕ್ಕೆ ಪಡೆಯಲಾಗಿದೆ,
​ಸುರಿಯುವ ಮಳೆಯನ್ನು ಲೆಕ್ಕಿಸದೆ ಕಾರ್ಯಾಚರಣೆ ನಡೆಸಿದ ತಹಶೀಲ್ದಾರ್ ಹಾಗೂ ಕಂದಾಯ ತಂಡದ ಅಧಿಕಾರಿ ಸಿಬ್ಬಂದಿಗಳಿಂದ ,​ಸ್ವಾಧೀನ ಪಡಿಸಿಕೊಂಡ ಜಮೀನಿನಲ್ಲಿ ಅತಿಕ್ರಮಣ ನಿಷೇಧಿಸಿದೆ’ ಎಂಬ ಎಚ್ಚರಿಕೆಯ ಬೋರ್ಡ್ ಕೂಡ ಅಳವಡಿಸಲಾಯಿತು.

ನಿಯಮ ಮೀರಿದವರ ಮೇಲೆ ಕಾಯ್ದೆ 192/A ಅಡಿ ಕ್ರಮ ಜರುಗಿಸಲಾಗಿದ್ದು, ​ತಾಲೂಕಿನಲ್ಲಿ ಎಲ್ಲಿಯೂ ಸರ್ಕಾರಿ ಜಮೀನು ಒತ್ತುವರಿ ಸಹಿಸುವುದಿಲ್ಲ ಎಂದು
ಅತಿಕ್ರಮಣಕಾರರಿಗೆ ತಹಶೀಲ್ದಾರ್ ಡಾ ಪ್ರತಿಭ ಖಡಕ್ ವಾರ್ನಿಂಗ್ ನೀಡಿದ್ದಾರೆ.

​ಯಾವುದೇ ಒತ್ತಡಕ್ಕೂ ಮಣಿಯದೆ ಕರ್ತವ್ಯ ನಿರ್ವಹಿಸುತ್ತಿರುವ ತಹಶೀಲ್ದಾರ್ ಡಾ.ಪ್ರತಿಭಾ, ರವರಿಗೆ
​ಕಾರ್ಯಾಚರಣೆಯಲ್ಲಿ ಸಾತ್ ನೀಡಿದ ಉಪ ತಹಶೀಲ್ದಾರ್ ಮಾಲಿನಿ, ಆರ್‌ಐ ಬೀರಪ್ಪ, ಪಿಡಿಒ ವಿಶ್ವಾಸ್, ಸರ್ವೇಯರ್ ಹಾಗೂ ಅರಣ್ಯಾಧಿಕಾರಿಗಳು.

Spread the love

You may also like

Leave a Comment