Home Uncategorized ಸೆ. 4ರಂದು ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ಸೇವಾರತ್ನ ಪ್ರಶಸ್ತಿ ವಿತರಣೆ.

ಸೆ. 4ರಂದು ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ಸೇವಾರತ್ನ ಪ್ರಶಸ್ತಿ ವಿತರಣೆ.

by Mahesh malenaadu

ಶಿವಮೊಗ್ಗ: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ವತಿಯಿಂದ ಸೆ. 4ರಂದು ಸಂಜೆ 6 ಗಂಟೆಗೆ ಆರ್ ಟಿ ಓ ರಸ್ತೆಯಲ್ಲಿರುವ ಜಿಲ್ಲಾ ನಿವೃತ್ತಿ ನೌಕರರ ಭವನದಲ್ಲಿ ಪತ್ರಿಕಾ ವಿತರಕರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಎನ್. ಮಾಲತೇಶ್ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವೈದ್ಯನಾಥ್, ರಾಜ್ಯ ಸಮಿತಿ ಸದಸ್ಯರಾದ ಟೆಲಿಕ್ಸ್ ರವಿಕುಮಾರ್, ಶಿವಕುಮಾರ್, ಸಂಘದ ಕಾರ್ಯದರ್ಶಿ ಹಾಲಾಸ್ವಾಮಿ, ರಾಷ್ಟ್ರೀಯ ಸಮಿತಿ ಸದಸ್ಯರಾದ ಭಂಡಿಗಡಿ ನಂಜುಂಡಪ್ಪ, ಎನ್.ಆರ್. ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಗಾ.ರಾ. ಶ್ರೀನಿವಾಸ್, ರಾಘವೇಂದ್ರ ಶೆಟ್ಟಿ, ಖಜಾಂಚಿ ರೋಹಿತ್, ರಂಜಿತ್, ಪ್ರಶಸ್ತಿ ವಿಜೇತರಾದ ಶರತ್ ಕುಮಾರ್, ಸೂರ್ಯನಾರಾಯಣ ಹಾಗೂ ಕರವೇ ಕಾವಲು ಪಡೆಯ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಈ ಬಾರಿ ಸೇವಾರತ್ನ ಪ್ರಶಸ್ತಿಗೆ ಶಿವಮೊಗ್ಗದ ಶ್ರೀನಿವಾಸ್, ಭದ್ರಾವತಿಯ ಪರಶುರಾಮ್ ರಾವ್ ಹಾಗೂ ತೀರ್ಥಹಳ್ಳಿಯ ಚಂದ್ರಶೇಖರ್ ಎಸ್. ಶೆಟ್ಟಿ ಕಮ್ಮಾರಡಿ ಆಯ್ಕೆಯಾಗಿದ್ದಾರೆ.

ಪತ್ರಿಕಾ ವಿತರಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

Spread the love

You may also like

Leave a Comment