Home Uncategorized ಮುಸಿಯನೊಂದಿಗೆ ರೀಲ್ ಮಾಡಲು ಹೋಗಿ ಅನಾಹುತ!!

ಮುಸಿಯನೊಂದಿಗೆ ರೀಲ್ ಮಾಡಲು ಹೋಗಿ ಅನಾಹುತ!!

by Mahesh malenaadu

 

ತನ್ನ ಬೈಕ್ ಮೇಲೆ ಬಂದು ಕುಳಿತ ಮುಸಿಯನೊಂದಿಗೆ ಬೈಕ್ ರೌಂಡ್ ಹಾಕಲು ಹೊರಟ ಯುವಕನಿಗೆ ಶಾಕ್ !!

ಪ್ರಾಣಿಗಳು ಎಷ್ಟು ಸ್ನೇಹ ಜೀವಿಯೋ ಅಷ್ಟೇ ಅಪಾಯಕಾರಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ,

ಶಿವಮೊಗ್ಗ ನಗರದ ಕಾಶಿಪುರ ಬಡಾವಣೆಯಲ್ಲಿ ತನ್ನ ಬೈಕ್ ಮೇಲೆ ಬಂದು ಕುಳಿತ ಮುಸಿಯನೊಂದಿಗೆ ರೀಲ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿರುವ ಯುವಕ
ಬೈಕ್ ಸ್ಟಾರ್ಟ್ ಮಾಡಲು ಬೀಗ ಆನ್ ಮಾಡಲು ಹೋದಾಗ ಯುವಕನ ಕೈಗೆ ಹಟತ್ತಾಗಿ ಮುಸಿಯ ಬಾಯಿ ಹಾಕಿದೆ
ಕೈ ಬಿಡಿಸಿಕೊಳ್ಳುವಷ್ಟರಲ್ಲಿ ಯುವಕನ ಕೈ ಮಾಂಸವೇ ಕಟ್ ಆಗುವಂತೆ ಮುಸಿಯ ದಾಳಿ ನಡೆಸಿದೆ.

ರಕ್ತ ಚೆಲ್ಲಿದಾಗಲೇ ಯುವಕನಿಗೆ ಗೊತ್ತಾಗಿದ್ದು ಮುಸಿಯ ಇಷ್ಟು ಗಂಭಿರವಾಗಿ ಅಟ್ಯಾಕ್ ಮಾಡಿದೆ ಅಂತಾ, ಕೈ ಗಾಯಗೊಳಿಸಿ ಮುಸಿಯ ಕ್ಷಣಾರ್ಧದಲ್ಲಿ ಅಲ್ಲಿಂದ ಮಾಯವಾಗಿದೆ.

ಮುಸಿಯನ ದಾಳಿಗೊಳಗಾಗಿದ್ದ ಕಾಶಿಪುರ ಬಡಾವಣೆಯ ಹುಚ್ಚರಾಯ ಕಾಲೋನಿಯ ಕುಮಾರ ನಾಯ್ಕ ಕೂಡಲೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾನೆ.

Spread the love

You may also like

Leave a Comment