Home Uncategorized ಬೆಂಗಳೂರು ಮೂಲದ ಸಿವಿಲ್ ಕಂಟ್ರಾಕ್ಟರ್ ನಿಗೂಢ ನಾಪತ್ತೆ, ಮಾಹಿತಿ ನೀಡಲು ಪೊಲೀಸರ ಮನವಿ

ಬೆಂಗಳೂರು ಮೂಲದ ಸಿವಿಲ್ ಕಂಟ್ರಾಕ್ಟರ್ ನಿಗೂಢ ನಾಪತ್ತೆ, ಮಾಹಿತಿ ನೀಡಲು ಪೊಲೀಸರ ಮನವಿ

by Mahesh malenaadu

ಶಿವಮೊಗ್ಗ: ಬೆಂಗಳೂರಿನ ಕೊಡಿಗೆಹಳ್ಳಿಯ ವೆಲ್ ಪುಲಾ ಆಸ್ ಡೆಲ್ ಅಪಾರ್ಟ್‌ಮೆಂಟ್ ನಿವಾಸಿಯಾಗಿರುವ 55 ವರ್ಷದ ಸಿವಿಲ್ ಕಂಟ್ರಾಕ್ಟರ್ ಅನಿಲ್ ಬಿ. ರಾಮ್‌ದಾಸ್ ಎಂಬುವವರು ತೀರ್ಥಹಳ್ಳಿಯಲ್ಲಿ ಕಾಣೆಯಾಗಿದ್ದಾರೆ.

​ಆಗಸ್ಟ್ 14ರಂದು ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಯೂರ ಹೋಟೆಲ್ ಲಾಡ್ಜ್‌ನಲ್ಲಿ ತಂಗಿದ್ದ ಇವರು, ಆಗಸ್ಟ್ 15ರಂದು ಬೆಳಗಿನ ಜಾವ 5.30ರ ಸುಮಾರಿಗೆ ಲಾಡ್ಜ್‌ನಿಂದ ತೆರಳಿದ್ದು, ಇದುವರೆಗೂ ಪತ್ತೆಯಾಗಿಲ್ಲ.
​ಕಾಣೆಯಾದ ಅನಿಲ್ ಬಿ. ರಾಮ್‌ದಾಸ್ ಅವರು ಸುಮಾರು 5.4 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ ಹಾಗೂ ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಕಾಣೆಯಾದ ಸಮಯದಲ್ಲಿ ಅವರು ಬ್ಲೂ ಜೀನ್ಸ್ ಪ್ಯಾಂಟ್ ಮತ್ತು ಬ್ಲೂ ಶರ್ಟ್ ಧರಿಸಿದ್ದರು.
​ಈ ವ್ಯಕ್ತಿಯ ಬಗ್ಗೆ ಯಾವುದೇ ಸುಳಿವು ಅಥವಾ ಮಾಹಿತಿ ದೊರೆತಲ್ಲಿ ತಕ್ಷಣವೇ ತೀರ್ಥಹಳ್ಳಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

Spread the love

You may also like

Leave a Comment