82
ಶಿರಾಳಕೊಪ್ಪ: ಪ್ರತಷ್ಟಿತ ಚಟ್ಟೆ ಅಂಗಡಿಗೆ ಬೆಂಕಿಬಿದ್ದು ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದೆ, ಕೆಲವೇ ನಿಮಿಷಗಳಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾದ ಬಟ್ಟೆ ಅಂಗಡಿ
ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದ ಮುಖ್ಯ ರಸ್ತೆಯಲ್ಲಿರುವ ಬಟ್ಟೆ ಅಂಗಡಿ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿರುವ ಮುಖ್ಯ ರಸ್ತೆಯಲ್ಲಿರುವ ರೇಂಜ್ 1 ಎಂಬ ಬಟ್ಟೆ ಅಂಗಡಿ ಬೆಂಕಿಗಾಹುತಿ
ರಹೀಮ್ ಎಂಬುವವರಿಗೆ ಸೇರಿದ ಬಟ್ಟೆ ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದೆ, ಈದ್ ಮಿಲಾದ್ ಹಬ್ಬಕ್ಕೆಂದು ಮತ್ತಷ್ಟು ಹೊಸದಾಗಿ ಬಟ್ಟೆ ಸ್ಟಾಕ್ ತರಿಸಿದ್ದ ರಹೀಮ್ , ಸುಮಾರು 2 ಕೋಟಿ ರೂ. ಅಧಿಕ ನಷ್ಟ ಎಂದು ಅಂದಾಜಿಸಲಾಗಿದೆ.
ಇಂದು ಮುಂಜಾನೆ ಸುಮಾರು 5 ವರೆ ಗಂಟೆ ವೇಳೆಗೆ ನಡೆದಿರುವ ಈ ಘಟನೆ ನಡೆದಿದ್ದು ಕೆಲವೇ ನಿಮಿಷಗಳಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದರೂ ಇಡೀ ಅಂಗಡಿ ಸುಟ್ಟು ಕರಕಲಾಗಿದೆ.

