157
ಶಿವಮೊಗ್ಗ: ನಗರದ ಹರಕೆಬಳಿಯ ರಿಂಗ್ ರೋಡ್ ನಲ್ಲಿ ರಾಬರಿ ಮಾಡಿದ್ದವರ ಕಾರು ಸಮೇತ ಅರೆಸ್ಟ್ ಮಾಡಿದ ಶಿವಮೊಗ್ಗ ತುಂಗಾನಗರ ಠಾಣೆ ಪೊಲೀಸರು,
ಶಿವಮೊಗ್ಗ ಅಣ್ಣಾ ನಗರದ ಅಮಾನ್ (24) ವರ್ಷ, ಅಶೋಕನಗರದ ಮೊಹಮ್ಮದ್ ಶೆಹಜಾನ್ (22), ಗೋಪಿ ಸರ್ಕಲ್ ನ ಹೇಮಂತ (21) ಆರೋಪಿಗಳ ಬಂಧಿಸಲಾಗಿದೆ
ಈ ಮೂವರು ಹರಕೆರೆ ರಿಂಗ್ ರಸ್ತೆಯಲ್ಲಿ ರಾಬರಿ ಮಾಡಿದ್ದ ಆರೋಪಿಗಳಾಗಿದ್ದು ಕಾರಿನಲ್ಲಿ ಬಂದು ಅಲ್ಲಿದ್ದ ಇಬ್ಬರನ್ನು ಹೆದರಿಸಿ, ಹೊಡೆದು ಅವರಿಂದ ಹಣ ಮತ್ತು ಮೊಬೈಲ್ ರಾಬರಿ ಮಾಡಿದ್ದರೆಂದು ದೂರು ನೀಡಲಾಗಿತ್ತು.
ಆರೋಪಿಗಳಿಂದ 30,500 ರೂ. ನಗದು, 2 ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರು ವಶಕ್ಕೆ ಪಡೆದ ಪೋಲಿಸರು ತನಿಕೆ ಮುಂದುವರೆಸಿದ್ದಾರೆ.

