ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ವೇಳೆ ಕುಮಾರ್ ಬಂಗಾರಪ್ಪ ಆರೋಪಗಳಿಗೆ ಮೊದಲಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಮಧು ಬಂಗಾರಪ್ಪ, ನಂತರ ಮಾತನಾಡಿ ಅವರ ಪಕ್ಷದಲ್ಲೇ ಅವರು ಡಮ್ಮಿಯಾಗಿ ಎಲ್ಲಿ ಹೋಗಿ ಕೂತಿದ್ದಾರೆ ಅನ್ನೋದು ಅವರೇ ನೋಡಿಕೊಳ್ಳಲಿ ಎಂದು ವಾಗ್ದಾಳಿ ಪ್ರಾರಂಭಿಸಿದ ಅವರು
ಕುಮಾರ್ ಬಂಗಾರಪ್ಪ ದಿಕ್ಕುದೆಸೆ ಇಲ್ಲದೇ ಕೂತಿದ್ದಾರೆ ಹೊಲಸು ಹೇಳಿಕೆ ನಾನು ಉತ್ತರ ನೀಡಲು ಹೋಗಲ್ಲ, ಇದನ್ನು ಹೊರತು ಪಡಿಸಿ ಮಾತನಾಡಲು ಬಹಳಷ್ಟು ವಿಚಾರಗಳಿವೆ, ಅವರು ಒಂದು ರೀತಿ ತುಕ್ಕು ಹಿಡಿದ ಕಾರಿದ್ದಂತೆ
ತುಕ್ಕು ಹಿಡಿದ ಕಾರನ್ನು ಎಷ್ಟು ಬಾರಿ ಗ್ಯಾರೇಜ್ ಗೆ ತೆಗೆದುಕೊಂಡು ಹೋಗಲು ಸಾಧ್ಯ !?
ಗ್ಯಾರೇಜ್ ಓನರ್ರೇ ಆಮೇಲೆ ಹೇಳಿಬಿಡ್ತಾರೆ, ಇದು ತುಕ್ಕು ಹಿಡಿದಿದೆ ಇದನ್ನು ರಿಪೇರಿ ಮಾಡಲು ಆಗಲ್ಲ ಅಂತಾ!
ಇಂತಹ ತುಕ್ಕು ಹಿಡಿದ ಪ್ರಶ್ನೆಗಳನ್ನು ನೀವು ಕೇಳಬಾರದು
ತುಕ್ಕು ಹಿಡಿದವರ ಬಗ್ಗೆ ನಾನು ಮಾತನಾಡಲ್ಲ ಇದರಿಂದ ಸಮಯ ವ್ಯರ್ಥ್ಯವಾಗುತ್ತದೆ ಅಷ್ಟೇ ಎಂದು ಕಾರವಾಗೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ.
ಪ್ರಶ್ನೆಗಳು ಹೇಗಿರಬೇಕೆಂದರೆ, ದೇಶ ಮತ್ತು ರಾಜ್ಯಕ್ಕೆ ಒಳ್ಳೆಯದಾಗಬೇಕು ಆ ರೀತಿಯಲ್ಲಿ ನಿಮ್ಮ ಪ್ರಶ್ನೆಗಳು ಇರಬೇಕು ವ್ಯಾಲ್ಯೂಬಲ್ ಪ್ರಶ್ನೆಗಳನ್ನು ಕೇಳಿ ಎಂದು ಮಾದ್ಯಮದವರಿಗೆ ಹೇಳಿದ ಮಧು ಬಂಗಾರಪ್ಪ

