Home Uncategorized ಬ್ರೇಕ್ ಫೇಲ್ ಆಗಿ 4 ಕಾರಿಗೆ ಡಿಕ್ಕಿಯಾದ ಖಾಸಗಿ ಬಸ್, ಅಪಾಯದಿಂದ ಪಾರಾದ ಸ್ಥಳದಲ್ಲಿದ್ದ ಜನರು

ಬ್ರೇಕ್ ಫೇಲ್ ಆಗಿ 4 ಕಾರಿಗೆ ಡಿಕ್ಕಿಯಾದ ಖಾಸಗಿ ಬಸ್, ಅಪಾಯದಿಂದ ಪಾರಾದ ಸ್ಥಳದಲ್ಲಿದ್ದ ಜನರು

by Mahesh malenaadu

ಶಿವಮೊಗ್ಗ: ಜಿಲ್ಲೆಯ  ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಸ್ ನಿಲ್ದಾಣದಲ್ಲಿ ಬುದುವಾರ ಸಂಜೆ ನಡೆದಿರುವ ಘಟನೆ ಇದಾಗಿದ್ದು, ಬಸ್ಟಾಂಡ್ ನಲ್ಲಿ ನಿಲ್ಲಿಸಿದ್ದ ಬಸ್ಸು ಏಕಾಏಕೀ ಹಿಮ್ಮುಖವಾಗಿ ಚಲಿಸಿ ಈ ಅವಘಡ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತಿದೆ.

ಈ ಘಟನೆಯಿಂದ ನಾಲ್ಕಕ್ಕೂ ಹೆಚ್ಚು ಕಾರುಗಳು, ಸೇರಿದಂತೆ ಒಂದು ಬೈಕ್ ಜಖಂಗೊಂಡಿದ್ದು ಸದ್ಯ ಯಾರಿಗೂ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ,

ಘಟನೆ ಸಂಭಂದ ಖಾಸಗಿ ಬಸ್ ಡ್ರೈವರ್ ವಿರುದ್ಧ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದು ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

You may also like

Leave a Comment