Home ರಾಜಕೀಯ ರಾಜ್ಯದಲ್ಲಿ ರಾಜ್ಯ ಸರ್ಕಾರ ಅತಂತ್ರವಾಗಿದೆ. ಶಿವಮೊಗ್ಗದಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿಕೆ

ರಾಜ್ಯದಲ್ಲಿ ರಾಜ್ಯ ಸರ್ಕಾರ ಅತಂತ್ರವಾಗಿದೆ. ಶಿವಮೊಗ್ಗದಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿಕೆ

by Mahesh malenaadu

ಶಿವಮೊಗ್ಗ: ರಾಜ್ಯ ಸರ್ಕಾರದಲ್ಲಿ ತೋಟಗಾರಿಕೆ ಸಚಿವರಿಲ್ಲ, ಕೃಷಿ ಸಚಿವರು ಕೂಡ ಇಲ್ಲ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕಾಲಹರಣ ಮಾಡುತ್ತಿದೆ ವಾರಗಟ್ಟಲೇ ಹೋಗಿ ಮುಖ್ಯಮಂತ್ರಿಗಳು ದೆಹಲಿಯಲ್ಲಿ ಕೂತಿದ್ದರು.

ಬೆಂಗಳೂರಿನಲ್ಲಿ ಇದ್ದಂತಹ ನೀರಾವರಿ ಸಚಿವರಿಗೆ ನೀರಾವರಿ ಬಗ್ಗೆ ಗಂಧಗಾಳಿ ಇಲ್ಲ, ಬೆಂಗಳೂರಿನಲ್ಲಿರುವ ಒಬ್ಬ ವ್ಯಕ್ತಿಗೆ ತಂದು ನೀರಾವರಿ ಕೊಟ್ಟರೆ ಹೇಗೆ..?

ಇವರಿಗೆ ಸಂಪನ್ಮೂಲ, ಸಂಪದ್ಭರಿತ ಖಾತೆ ಇದ್ದರೆ ಸಾಕು
ಇಂತಹವರು ಜಲ ಸಂಪನ್ಮೂಲ ಖಾತೆ ಇಟ್ಟುಕೊಂಡು ಏನು ಮಾಡ್ತಾರೆ..!

ರಾಜ್ಯದಲ್ಲಿಗ ಖಾತೆಗಳು ಖ್ಯಾತೆಯಾಗಿವೆ, ನೀವು ನಾಲ್ಕು ಗೋಡೆಗಳ ಮಧ್ಯೆ ಏನಾದರೂ ಮಾಡಿಕೊಳ್ಳಿ ಆದರೆ ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಕೊಂಚ ಗಮನ ಹರಿಸಿ

ರಾಜ್ಯದಲ್ಲಿ ರೈತರ ಕಣ್ಣೀರು ಒರೆಸುವಂತಹ ಕೆಲಸವಾಗಬೇಕು
ಅಂಗವಿಕಲರು, ವಿಧೆವೆಯರು, ಸಂಧ್ಯಾ ಸುರಕ್ಷಾ, ಗೃಹಲಕ್ಷ್ಮೀ ಫಲಾನುಭವಿಗಳಿಗೆ ಬಿಡುಗಡೆ ಮಾಡಲು ಇವರ ಬಳಿ ಹಣವಿಲ್ಲ

ಇವರಿಗೆ ಯೋಜನೆಗಳಿಗೆ ಹಣ ಬೇಕು ಎಂದರೆ ಬಡವರ ಹೊಟ್ಟೆ ಮೇಲೆ ಹೊಡೆಯಬೇಕು ಅಷ್ಟೆ,
ಕನಿಷ್ಟ ಬರ ವೀಕ್ಷಣೆ ಮಾಡಲು ಕೂಡ ಜನರು ಇಲ್ಲದಂತಾಗಿದೆ

ಇಲ್ಲಿ ಯಾರು ಭ್ರಷ್ಟಾಚಾರಿಗಳು, ಯಾರು ಕ್ರಿಮಿನಲ್ಸ್ ಇದ್ದಾರೋ ಅವರು ಈ ಸರ್ಕಾರದಲ್ಲಿ ಪಾಲುದಾರರಿದ್ದಾರೆ, ಇವರು ಹೇಗೆ ಜನರ ರಕ್ಷಣೆ ಮಾಡ್ತಾರೆ ?

ಇವರ ರಾಜಕೀಯ ಏನಾದರೂ ಇರಲಿ, ಅವೆಲ್ಲವೂ ಬದಿಗೊತ್ತಿ ಬರಗಾಲದ ಬಗ್ಗೆ ಸ್ಪಂಧಿಸಬೇಕು
ರೈತರ ಬದುಕು ಹಸನಾಗಬೇಕು ಈ ನಿಟ್ಟಿನಲ್ಲಿ ನಮ್ಮ ಹೋರಾಟ ನಡೆಯುತ್ತಿದೆ.

ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟದಲ್ಲಿ ಬದಲಾವಣೆ ಇವೆಲ್ಲವೂ ಮಾಡಲು ಇವರಿಗೆ ಸಮಯವಿರುತ್ತದೆ.

ಸಚಿವ ಸಂಪುಟದಲ್ಲಿ ಯಾರಾದರೂ ಹೆಸರು ಚೇಂಜ್ ಮಾಡ್ತಾರೆ ಆದರೆ ಕುರ್ಚಿ ಕದನದಲ್ಲಿರುವ ಆಸಕ್ತಿ ಇಲ್ಲ್ಯಾಕೆ ತೋರಿಸುತ್ತಿಲ್ಲ ಸಮಸ್ಯೆಗಳನ್ನು ಗಂಭೀರವಾಗಿ ಬಗೆ ಹರಿಸಬೇಕಲ್ವಾ..? ಸಮಸ್ಯೆಗಳನ್ನು ಬಗೆಹರಿಸಲು ವಿಳಂಬ ಏಕೆ ?

ಹಣಕಾಸು ಇಲಾಖೆಗೆ ಹಣ ಬಿಡುಗಡೆ ಮಾಡಲು ಯೋಗ್ಯತೆ ಇಲ್ಲ ಅಂಗವಿಕಲರು, ವಿಧವೆಯರ ಹಣ ಕಟ್ ಮಾಡುತ್ತಾರೆ ಎಂದರೆ ಇವರ ಬಳಿ ಹಣವೇ ಇಲ್ಲ ರಾಜ್ಯ ಕಾಂಗ್ರೆಸ್ ಸರ್ಕಾರ ಪಾಪರ್ ಎದ್ದು ಹೋಗಿದೆ ಎಂದ ರೇಣುಕಾಚಾರ್ಯ

Spread the love

You may also like

Leave a Comment