Home ರಾಜಕೀಯ ಸಚಿವ ಸ್ಥಾನಕ್ಕೆ ನಾಗೇಂದ್ರನನ್ನು ಆಯ್ಕೆ ಮಾಡಿದ್ದೆ ತಪ್ಪು: ಬಿ ವೈ ವಿಜಯೇಂದ್ರ.

ಸಚಿವ ಸ್ಥಾನಕ್ಕೆ ನಾಗೇಂದ್ರನನ್ನು ಆಯ್ಕೆ ಮಾಡಿದ್ದೆ ತಪ್ಪು: ಬಿ ವೈ ವಿಜಯೇಂದ್ರ.

by Mahesh malenaadu

ಶಿವಮೊಗ್ಗ:  ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ರಾಜಿನಾಮೆಯನ್ನು ನಾನು ಸ್ವಾಗತ ಮಾಡಲು ಹೋಗಲ್ಲ, ಮೊದಲಿಗೆ ಅವರನ್ನು ಸಂಪುಟಕ್ಕೆ ತೆಗೆದುಕೊಂಡಿದ್ದೆ ಸರ್ಕಾರದ ತಪ್ಪು,

ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರ್ ಡೆತ್ ನೋಟ್ ನಲ್ಲಿ ಸಚಿವ ನಾಗೇಂದ್ರ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ನಾಗೇಂದ್ರರವರು ಮೌಖಿಕ ಆದೇಶದ ಹಿನ್ನೆಲೆಯಲ್ಲಿ ಹಣ ವರ್ಗಾವಣೆಯಾಗಿದೆ ಎಂದು ಹೇಳಿದ್ದಾರೆ,

ಈ ವಿಚಾರವಾಗಿ ಅಧಿವೇಶನ ನಡೆಯುವಾಗಲೆ ಅಹೋರಾತ್ರಿ ಧರಣಿ ನಡೆಸಿ ಪ್ರತಿಭನೆ ಕೂಡ ನಡೆಸಿದ್ವಿ, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾವುಗಳು ಸದನದ ಒಳಗೆ ಹೊರಗೆ ಪ್ರತಿಭಟಿಸಿದ್ವಿ,

ಅಧಿವೇಶನ ನಡೆಸುವ ಮುನ್ನ ರಾಜಿನಾಮೆ ನೀಡಿ ಅಧಿವೇಶನ ನಡೆಸಿ ಎಂದು ಪಟ್ಟು ಹಿಡಿದಿದ್ವಿ. ಆಗಲೇ ರಾಜಿನಾಮೆ ನೀಡಿದ್ದರೆ, ಅಧಿವೇಶನದಲ್ಲಿ ಬರದ ಹಾಗೂ ಇತರೆ ವಿಚಾರಗಳು ಚರ್ಚೆಯಾಗುತ್ತಿತ್ತು.

ಸಿಎಂ ಡಿಕೆ ಶಿವಕುಮಾರ್ ಗೆ ಪ್ರಶ್ನೆ ಮಾಡ್ತೆನೆ..? ವಾಲ್ಮೀಕಿ ನಿಗಮದ ಹಣ ಎಲ್ಲಿ ಹೋಗಿದೆ ಎಂದು ಹೇಳಿ 185 ಕೋಟಿ ರೂ. ಹಗರಣದ ಹಣ ನಿಗಮಕ್ಕೆ ವಾಪಾಸ್ ಬರಬೇಕು
ವಾಲ್ಮೀಕಿ ನಿಗಮಕ್ಕೆ ಹಣ ವಾಪಾಸ್ ಹೋಗುವವರೆಗೂ ನಮ್ಮ ಹೋರಾಟ ನಿಲ್ಲಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಗ್ರಹಿಸಿದ್ದಾರೆ.

ರೈತರ ಪರವಾಗಿ, ಗೃಹಲಕ್ಷ್ಮಿ ಹಣದ ವಿಚಾರ, ನಾಗೇಂದ್ರ ರಾಜಿನಾಮೆ ವಿಚಾರ, ವಾಲ್ಮೀಕಿ ನಿಗಮದ ಹಣ ವಾಪಾಸ್ಸಾತಿಗೆ ನಮ್ಮ ಹೋರಾಟ ನಡೆಸಲಾಗುತ್ತಿದೆ ಲಿಂಗೂಗೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ವಿ. ಕಾಂಗ್ರೆಸ್ ಎಲ್ಲಾ ಸಮುದಾಯಗಳಿಗೆ ದ್ರೋಹ ಮಾಡುವ ಕೆಲಸ ಮಾಡಿದೆ

ಚಂದ್ರಶೇಖರ್ ಪತ್ನಿಗೆ ಇವತ್ತಿನವರೆಗೂ ಪಿಎಫ್ ಹಣ ಬಂದಿಲ್ಲ ಈ ಎಲ್ಲಾ ವಿಚಾರಗಳನ್ನಿಟ್ಟುಕೊಂಡು ನಾವು ಹೋರಾಟ ಮಾಡುತ್ತಿದ್ದೆವೆ.

ಸಿದ್ಧರಾಮಯ್ಯನವರ ಅವಧಿಯಲ್ಲಿ ಸಿಬಿಐ ತನಿಖೆ ನಡೆಸಿದ್ದನ್ನು ನೋಡಿದ್ದೆವೆ,
ನಮ್ಮ ಹೋರಾಟ ದಲಿತ ಸಮುದಾಯದ ಪರವಾಗಿ ನಡೆಸಲಾಗುತ್ತಿದೆ
ನಾಗೇಂದ್ರ ಹೇಳಿಕೆಗೆ ಕಿಂಚಿತ್ತು ಕಿಮ್ಮತ್ತಿಲ್ಲ…

Spread the love

You may also like

Leave a Comment