195
ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹರಳಿಮಠ ಬಳಿ ಕಾಡುಕೋಣ ಹತ್ಯೆ ಮಾಡಿ ಅವಶೇಷಗಳನ್ನು ಮಾತ್ರ ಬಿಟ್ಟು ಹೋಗಿರುವ ಘಟನೆ ತೀರ್ಥಹಳ್ಳಿ – ಬಸವಾನಿ ಮಾರ್ಗ ಮಧ್ಯೆ ಇರುವ ಹರಳಿಮಠ ಗ್ರಾಮದ ಬಳಿ ನಡೆದಿದೆ.
ಸ್ಥಳಿಯರ ಪ್ರಕಾರ ನಿನ್ನೆ ರಾತ್ರಿ ಗನ್ ಶಬ್ಧ ಕೇಳಿ ಬಂದಿತ್ತು ,
ಕಾಡುಕೋಣ ಮಾಂಸವನ್ನು ತೆಗೆದುಕೊಂಡು ಹೋಗಿ ಮೂಳೆಗಳನ್ನು ರಸ್ತೆ ಬದಿಯಲ್ಲೇ ಎಸೆದು ಹೋಗಿದ್ದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ತನಿಖೆ ಬಳಿಕ ಸತ್ಯಾಸತ್ಯತೆ ಹೊರಬೀಳುವ ಸಾಧ್ಯತೆಯಿದೆ.

