Home ಅಪರಾಧ ಸಾಗರದಲ್ಲಿ ಬೋರ್‌ವೆಲ್ ಕೇಬಲ್ ಕದಿಯುತ್ತಿದ್ದ ಜಾಲ ಪತ್ತೆ: ನಾಲ್ವರ ಬಂಧನ, ಓಮ್ನಿ ಕಾರು ವಶ!

ಸಾಗರದಲ್ಲಿ ಬೋರ್‌ವೆಲ್ ಕೇಬಲ್ ಕದಿಯುತ್ತಿದ್ದ ಜಾಲ ಪತ್ತೆ: ನಾಲ್ವರ ಬಂಧನ, ಓಮ್ನಿ ಕಾರು ವಶ!

by Mahesh malenaadu

ಸಾಗರ: ತೋಟಗಳ ಬೋರ್‌ವೆಲ್ ಕೇಬಲ್ ಕದಿಯುತ್ತಿದ್ದ ನಾಲ್ವರು ಆರೋಪಿಗಳನ್ನು ಸಾಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಸಾಗರ ತಾಲೂಕಿನ ಭೀಮನೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
​ಆಗಸ್ಟ್ 16ರಂದು ಕೃಷ್ಣಪ್ಪ ಎಂಬುವವರ ತೋಟದಲ್ಲಿ ಮೋಟಾರ್ ಆನ್ ಆಗದಿದ್ದಾಗ ಕೇಬಲ್ ಕಟ್ ಆಗಿರುವುದು ಬೆಳಕಿಗೆ ಬಂದಿದೆ. ಪಕ್ಕದ ತೋಟದಲ್ಲಿ ಕಳ್ಳತನ ಮಾಡುತ್ತಿದ್ದವರನ್ನು ಗ್ರಾಮಸ್ಥರು ಬೆನ್ನಟ್ಟಿದಾಗ ಆರೋಪಿಗಳು ಪರಾರಿಯಾಗಿದ್ದರು. ಆದರೆ ಸ್ಥಳದಲ್ಲಿದ್ದ KA-11-M-1288 ಮಾರುತಿ ಓಮ್ನಿ ಕಾರಿನ ಚಾಲಕ ನೇಹಾಲ್‌ನನ್ನು ಹಿಡಿದು ವಿಚಾರಿಸಿದಾಗ ಇಡೀ ಕಳ್ಳತನ ಜಾಲ ಬಯಲಾಗಿದೆ.
​ಬಂಧಿತರಿಂದ ₹25,000 ಮೌಲ್ಯದ ಕೇಬಲ್, ಕಟಿಂಗ್ ಪ್ಲೈಯರ್ ಹಾಗೂ ಓಮ್ನಿ ಕಾರನ್ನು ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ಮೊಹಮ್ಮದ್ ಸದಾಕತ್ ಉಲ್ಲಾ ಮತ್ತು ನೇಹಾಲ್ ಸೇರಿದಂತೆ ನಾಲ್ವರ ವಿರುದ್ಧ BNS ಕಲಂ 303(2) ಅಡಿಯಲ್ಲಿ (ಅಪರಾಧ ಸಂಖ್ಯೆ: 125/2026) ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆ ಕಾಯ್ದುಕೊಂಡಿದ್ದಾರೆ.

Spread the love

You may also like

Leave a Comment