by Mahesh malenaadu

ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ವತಿಯಿಂದ, ರಾಮಣ್ಣ  ಅವರ ನೇತೃತ್ವದಲ್ಲಿ. 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ರಾಗಿ ಗುಡ್ಡದಲ್ಲಿ ಹಮ್ಮಿಕೊಳ್ಳಲಾಯತು.

ಶಿವಮೊಗ್ಗ:  ರಾಗಿಗುಡ್ಡದಲ್ಲಿ ನಡೆದ   ಸ್ವಾತಂತ್ರೋತ್ಸವದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿರೇಮಠ ಬಿಳಕಿಯ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ, ಹಾಗೂ ಸ್ವಾತಂತ್ರ್ಯ ದಿನಾಚರಣೆಯನ್ನು ಹೇಗೆ ಆಚರಿಸ ಬೇಕು ಎಂಬುವುದರ ಬಗ್ಗೆ ಹಿತನುಡಿಗಳನ್ನು ಹೇಳಿದರು.

ಇನ್ನು ಧ್ವಜಾರೋಹಣವನ್ನು ಖ್ಯಾತ ಉದ್ಯಮಿಗಳು ಹಾಗೂ ಜನಪ್ರತಿನಿಧಿಗಳಾದ ಜ್ಯೋತಿಪ್ರಕಾಶ್ ಅವರು ನೆರವೇರಿಸಿದರು.

ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಅಂಗವಿಕಲ ಮತ್ತು ವಿಕಲಚೇತನರಿಗೆ ವಿಶೇಷವಾದ ಕಿಟ್ ನೀಡಿ ಅವರನ್ನು ಸನ್ಮಾನಿಸಲಾಯಿತು. ಹಾಗೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಕೀಲರಾದಂತಹ ಅನಿಲ್ ಕುಮಾರ್ ಮತ್ತು ಸಾಹಿತಿಗಳು ಪತ್ರಕರ್ತರಾದ ಗಾರಾ, ಶ್ರೀನಿವಾಸ್. ಚಲನಚಿತ್ರ ನಟ ರಘು ಮಲ್ನಾಡ್. ಕರವೇ ಕಾವಲು ಪಡೆಯ ಜಿಲ್ಲಾಧ್ಯಕ್ಷರಾದ ಶಿವಕುಮಾರ್ ಎಸ್, ಬಿ.
ಪ್ರಧಾನ ಕಾರ್ಯದರ್ಶಿಯಾದ ಕೆ,ಬಿ ಉಮೇಶ್. ಉಪಾಧ್ಯಕ್ಷರಾದ ರಮೇಶಣ್ಣ ಮಲ್ಲಿಗೆನಹಳ್ಳಿ,ಪತ್ರಿಕಾ ಸಂಚಾಲಕರಾದ ಎನ್, ಮಾಲತೇಶ್, ರಾಮು, ಕರವೇ ಮಹಿಳಾ ಘಟಕದ ಅಧ್ಯಕ್ಷರಾದ ಶಾರದಾ ಶ್ರೀಧರ್ಮೂರ್ತಿ, ಉಪಾಧ್ಯಕ್ಷರಾದ ಅನ್ನಪೂರ್ಣ ಕೃಷ್ಣವೇಣಿ ಹಾಗೂ ಕರವೇ ಕಾವಲುಪಡೆಯ ಹೊಸದುರ್ಗ ಅಧ್ಯಕ್ಷರಾದ ವೀಣಾ ಮತ್ತು ಅವರ ಪದಾಧಿಕಾರಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಣೆ ಮಾಡಲಾಯಿತು.

Spread the love

You may also like

Leave a Comment