Home ಅಪರಾಧ ಉಪ ತಹಶೀಲ್ದಾರ್ ಗೆ 4 ವರ್ಷಗಳ ಕಾಲ ಜೈಲು ಶಿಕ್ಷೆ 40,000 ರೂ. ದಂಡ

ಉಪ ತಹಶೀಲ್ದಾರ್ ಗೆ 4 ವರ್ಷಗಳ ಕಾಲ ಜೈಲು ಶಿಕ್ಷೆ 40,000 ರೂ. ದಂಡ

by Mahesh malenaadu

 

ಶಿವಮೊಗ್ಹುಗ:  ಹುಟ್ಟು ಮೂಕನಾಗಿರುವ ತಂದೆಗೆ ಅಂಗವಿಕಲರ ವೇತನ ಕೊಡಿಸಲು 10,000 ರೂ.ಲಂಚಕ್ಕೆ ಬೇಡಿಕೆಯಿಟ್ಟಿದ್ದ ನಾಡ ಕಚೇರಿ ಉಪ ತಹಶಿಲ್ದಾರ್ ಪುಷ್ಪಲತಾ ಎಂಬುವವರ ಆರೋಪ ಸಾಬೀತು ಹಿನ್ನೆಲೆ, ಶಿವಮೊಗ್ಗದ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

2017 ರಲ್ಲಿ ಲಂಚದ ಹಣವನ್ನು ಮುಂಗಡವಾಗಿ 5 ಸಾವಿರ ರೂ. ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಭದ್ರಾವತಿ ತಾಲೂಕಿನ ಕಲ್ಲಿಹಾಳ್ ಉಪ ತಹಶಿಲ್ದಾರ್ ಪುಷ್ಪಲತ. ಭದ್ರಾವತಿ ತಾಲೂಕಿನ ಡಿ.ಬಿ. ಹಳ್ಳಿಯ ನಿವಾಸಿ ಗಿರೀಶ್‌ ಎಂಬುವವರು ತಮ್ಮ ಹುಟ್ಟು ಮೂಕ ತಂದೆಗೆ ಅಂಗವಿಕಲರ ಪಿಂಚಣಿ ಸೌಲಭ್ಯ ಪಡೆಯಲು ಪುಷ್ಪಲತ ಲಂಚ ಕೇಳಿದ್ದರು ಎಂದು ನೀಡಿದ್ದ ದೂರಿನನ್ವಯ 2017 ರ ಸೆಪ್ಟೆಂಬರ್ 21 ರಂದು ಪ್ರಕರಣ ದಾಖಲಾಗಿತ್ತು.

ಈ ಹಿನ್ನೆಲೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆಗಿನ‌ಅಧಿಕಾರಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಶಿವಮೊಗ್ಗದ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯ

2026 ರ ಸೆಪ್ಟೆಂಬರ್ 1 ರಂದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾದಿ ಪುಷ್ಪಲತ ರವರಿಗೆ 4 ವರ್ಷ ಜೈಲು 40,000 ರೂ ದಂಡ ಶಿಕ್ಷೆ ಪ್ರಕಟಿಸಿದೆ.

Spread the love

You may also like

Leave a Comment