Home ಅಪರಾಧ ಸಾಕು ನಾಯಿಗೆ ಕಚ್ಚಿದ್ದಕ್ಕೆ ಬಂದೂಕಿನಿಂದ ಗುಂಡಿಟ್ಟು ಬೀದಿ ನಾಯಿ ಕೊಂದ ಪಾಪಿ!

ಸಾಕು ನಾಯಿಗೆ ಕಚ್ಚಿದ್ದಕ್ಕೆ ಬಂದೂಕಿನಿಂದ ಗುಂಡಿಟ್ಟು ಬೀದಿ ನಾಯಿ ಕೊಂದ ಪಾಪಿ!

by Mahesh malenaadu

ಶಿವಮೊಗ್ಗ: ತನ್ನ ಮನೆಯ ಸಾಕು ನಾಯಿ ಜೊತೆ ಕಾದಾಡಿದ್ದಕ್ಕೆ ಅಕ್ರಮ ಬಂದೂಕಿನಿಂದ ಗುಂಡಿಟ್ಟು ಬೀದಿ ನಾಯಿಯೊಂದನ್ನು ಭೀಕರವಾಗಿ ಕೊಂದ ಘಟನೆ ಸಾಗರ ತಾಲೂಕಿನ ನಾಡವಳ್ಳಿ ಗ್ರಾಮದಲ್ಲಿ ನಡೆದಿದೆ.
​ಗ್ರಾಮದ ಬೋರೆಪ್ಪ ಎಂಬುವವರು ದನ ಮೇಯಿಸಲು ಹೋಗುತ್ತಿದ್ದಾಗ ಅವರ ಹಿಂದೆ ಕಂದು ಬಣ್ಣದ ಗಂಡು ನಾಯಿಯೊಂದು ಬಂದಿತ್ತು. ಮಾರ್ಗಮಧ್ಯೆ ಲಿಂಗಮೂರ್ತಿ ಎಂಬಾತನ ಮನೆಯ ಬಳಿ ಬಂದಾಗ, ಆತನ ಸಾಕು ನಾಯಿಗಳೊಂದಿಗೆ ಈ ನಾಯಿ ಕಚ್ಚಾಡಿದೆ. ಇದರಿಂದ ಆಕ್ರೋಶಗೊಂಡ ಲಿಂಗಮೂರ್ತಿ, ತಕ್ಷಣವೇ ಅಕ್ರಮ ಬಂದೂಕಿನಿಂದ ನಾಯಿಯ ಮೇಲೆ ಗುಂಡು ಹಾರಿಸಿದ್ದಾನೆ.
​ಗುಂಡೇಟು ತಗುಲಿ ನಾಯಿ ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಮೃತಪಟ್ಟಿದೆ. ಪರವಾನಗಿ ಇಲ್ಲದೆ ಬಂದೂಕು ಬಳಸಿ ಪ್ರಾಣಿ ಹತ್ಯೆ ಮಾಡಿದ ಹಿನ್ನೆಲೆಯಲ್ಲಿ, ಆನಂದಪುರ ಪಿಎಸ್‌ಐ ಪ್ರವೀಣ್ ಅವರು ಲಿಂಗಮೂರ್ತಿ ವಿರುದ್ಧ ಬಿಎನ್‌ಎಸ್ ಹಾಗೂ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Spread the love

You may also like

Leave a Comment