Home ಅಪರಾಧ ಶಾಂತವೇರಿ ಗೋಪಾಲಗೌಡ ಹೆಸರಿನ ರಂಗ ಮಂದಿರಮೇಲೆ ಕಿಡಿಗೇಡಿಗಳ ಅಟ್ಟಹಾ

ಶಾಂತವೇರಿ ಗೋಪಾಲಗೌಡ ಹೆಸರಿನ ರಂಗ ಮಂದಿರಮೇಲೆ ಕಿಡಿಗೇಡಿಗಳ ಅಟ್ಟಹಾ

by Mahesh malenaadu

ಶಿವಮೊಗ್ಗ : ಜಿಲ್ಲೆಯ ಸಾಗರ ತಾಲೂಕಿನ ತುಮರಿಯಲ್ಲಿರುವ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡ ಹೆಸರಿನಲ್ಲಿರುವ ರಂಗಮಂದಿರದ ಮೇಲೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ,

ರಾತ್ರಿವೇಳೆ ಬಾಗಿಲು ಮುರಿದು ಒಳನುಗ್ಗಿರುವ ದುರುಳರು ರಂಗಮಂದಿರದ ಬಾಗಿಲು ಮುರಿದು ಒಳನುಗ್ಗಿರುವ ಕಿಡಿಗೇಡಿಗಳು, ಪೀಠೋಪಕರಣಗಳನ್ನು ಧ್ವಂಸಗೊಳಿಸಿ ರಂಗಮಂದಿರಕ್ಕೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ.

ತುಮರಿ ಭಾಗದಲ್ಲಿ ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರವಾಗಿದ್ದ ರಂಗಮಂದಿರದ ಮೇಲೆ ಆಗಿರುವ ಈ ದಾಳಿಯನ್ನು ಕಂಡು ತುಮರಿ ಗ್ರಾಮಸ್ಥರು ದಿಗ್ಬ್ರಾಂತರಾಗಿದ್ದಾರೆ.

ವಿಕೃತಿ ಮೆರೆದ ನೀಚರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಶಾಂತವೇರಿ ಗೋಪಾಲಗೌಡ ರಂಗಮಂದಿರ ನಿರ್ವಹಣೆ ಮಾಡ್ತಿದ್ದ ಅಭಿವ್ಯಕ್ತಿ ಬಳಗದ ವತಿಯಿಂದ, ಘಟನೆ ಸಂಬಂಧ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Spread the love

You may also like

Leave a Comment