67
ಶಿವಮೊಗ್ಗದಲ್ಲಿ ಪೊಲೀಸ್ ಜೀಪ್‌ಗೆ ಡಿಕ್ಕಿಹೊಡೆದ ಭೂಪ, ಸ್ಥಳದಲ್ಲೆ ವಾಹನ ಬಿಟ್ಟು ಪರಾರಿ..!
ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪೊಲೀಸ್ ಜೀಪಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ,
ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ, ನಿಯಂತ್ರಣ ಕಳೆದುಕೊಂಡ ಪೋಲಿಸ್ ಜೀಪ್ ಮರಕ್ಕೆ ಅಪ್ಪಳಿಸಿದೆ, ಬಟ್ಟೆಮಲ್ಲಪ್ಪ ಮತ್ತು ಕೋಡೂರು ಭಾಗದಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ಗಸ್ತು ಮುಗಿಸಿ ರಿಪ್ಪನಪೇಟೆಗೆ ಹಿಂದಿರುಗುತ್ತಿದ್ದ ಪಿಎಸ್‌ಐ ರಾಜುರೆಡ್ಡಿ, ಸಿಬ್ಬಂದಿ ವಿಶ್ವನಾಥ್ ಹಾಗೂ ಚಾಲಕ ಅವಿನಾಶ್,
ರಾತ್ರಿ ಸುಮಾರು 2.30ರ ವೇಳೆ ಈ ಘಟನೆ ನಡೆದಿದ್ದು ಪೊಲೀಸ್ ಜೀಪ್‌ಗೆ ಡಿಕ್ಕಿ ಹೊಡೆದ ವಾಹನ ಚಾಲಕ ಫೋರ್ಡ್ ಇಕೋ ವಾಹನವನ್ನು ನಿಲ್ಲಿಸಿ ಸ್ಥಳದಿಂದ ಪರಾರಿಯಾಗಿದ್ದ.

