39
ಶಿವಮೊಗ್ಗ: ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಚಾಲನೆ ಮಾಡಲು ದ್ವಿಚಕ್ರ ವಾಹನ ನೀಡಿದ್ದ ಮಾಲೀಕನಿಗೆ ನ್ಯಾಯಾಲಯ 27,000 ದಂಡ ವಿಧಿಸಿದೆ.
2025 ರಲ್ಲಿ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಬಾಲಕನಿಗೆ ವಾಹನ ನೀಡಿದ್ದ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿ 1ನೇ ಎ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ವಾಹನ ಮಾಲೀಕನಿಗೆ 27,000 ದಂಡ ವಿಧಿಸಿ ಆದೇಶಿಸಿದೆ. ಮಕ್ಕಳ ಕೈಗೆ ವಾಹನ ಕೊಡುವ ಪೋಷಕರು ಹಾಗೂ ಮಾಲೀಕರಿಗೆ ಈ ತೀರ್ಪು ಎಚ್ಚರಿಕೆಯ ಸಂದೇಶವಾಗಿದೆ.

