Home ಭಕ್ತಿ ಮೈದೊಳಲಿನಲ್ಲಿ ಹನುಮಂತ ದೇವರ ಕಾರ್ಣಿಕ: ಶಿಖರದ ತುದ್ದಿಗೆ ಘಟ ಸರ್ಪ ಏರಿತಲ್ಲೇ ಎಚ್ಚರ’ ಎಂದ ಗಣಮಗ

ಮೈದೊಳಲಿನಲ್ಲಿ ಹನುಮಂತ ದೇವರ ಕಾರ್ಣಿಕ: ಶಿಖರದ ತುದ್ದಿಗೆ ಘಟ ಸರ್ಪ ಏರಿತಲ್ಲೇ ಎಚ್ಚರ’ ಎಂದ ಗಣಮಗ

by Mahesh malenaadu

ಶಿವಮೊಗ್ಗ : ​ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ಪ್ರತಿವರ್ಷದಂತೆ ಶ್ರಾವಣ ಮಾಸದ ನಾಗರ ಪಂಚಮಿಯಂದು ಶ್ರೀ ಹನುಮಂತ ದೇವರ ಕಾರ್ಣಿಕೋತ್ಸವ ಶ್ರದ್ಧಾಭಕ್ತಿಗಳಿಂದ ಜರುಗಿತು.

​ಸೋಮವಾರ ಸಂಜೆ ಗೋದೂಳಿ ಲಗ್ನದಲ್ಲಿ ಗಂಗೆ ಪೂಜೆ ನೆರವೇರಿದ ಬಳಿಕ, ಹನುಮಂತ ದೇವರನ್ನು ಮೈಮೇಲೆ ಆಹ್ವಾನಿಸಿಕೊಂಡ ಗಣಮಗ ಪಿಳ್ಳೆಮಟ್ಟಿ ಗುಡ್ಡದ ಎತ್ತರದ ಕಂಬವೇರಿ ‘ಶಿಖರದ ತುದ್ದಿಗೆ ಘಟ ಸರ್ಪ ಏರಿತಲ್ಲೇ ಎಚ್ಚರ’ ಎಂದು ಕಾರ್ಣಿಕ ನುಡಿದರು.
​ಈ ಕಾರ್ಣಿಕದ ವಾಕ್ಯವನ್ನು ವಿಶ್ಲೇಷಿಸಿರುವ ಹಿರಿಯರು, ಈ ಬಾರಿ ಅನಾವೃಷ್ಟಿಯಿಂದ ಕೃಷಿ ಚಟುವಟಿಕೆಗಳಿಗೆ ಅಡೆಚಣೆ ಉಂಟಾಗಬಹುದು ಹಾಗೂ ಪ್ರಕೃತಿ ವಿಕೋಪ ಸಂಭವಿಸುವ ಸಾಧ್ಯತೆಯಿದೆ ಎಂದಿದ್ದಾರೆ. ಜೊತೆಗೆ ಅಡಿಕೆ ಬೆಳೆಗೆ ಮುಂದಿನ ದಿನಗಳಲ್ಲಿ ಹಿನ್ನಡೆಯಾಗುವ ಸೂಚನೆ ಇದಾಗಿದೆ ಎಂದು ಭವಿಷ್ಯ ಲೆಕ್ಕ ಹಾಕಿದ್ದಾರೆ. ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದ ಈ ಉತ್ಸವದಲ್ಲಿ ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.

Spread the love

You may also like

Leave a Comment