Home Uncategorized ಸೆ. 26 ರಿಂದ ಸಕ್ರೆಬೈಲು ಆನೆ ಬಿಡಾರ ಸಾರ್ವಜನಿಕ ಪ್ರವೇಶಕ್ಕೆ ಪುನರಾರಂಭ

ಸೆ. 26 ರಿಂದ ಸಕ್ರೆಬೈಲು ಆನೆ ಬಿಡಾರ ಸಾರ್ವಜನಿಕ ಪ್ರವೇಶಕ್ಕೆ ಪುನರಾರಂಭ

by Mahesh malenaadu

ಶಿವಮೊಗ್ಏಗ:    ಏ. 18 ರಂದು ದುಬಾರೆಯಲ್ಲಿ ನಡೆದಿದ್ದ ಆಕಸ್ಮಿಕ ದುರ್ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಆನೆ ಶಿಬಿರಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡುವಂತೆ ಅರಣ್ಯ ಸಚಿವರು ಸೂಚನೆ ನೀಡಿದ್ದರು.

ಈಗ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಕಟ್ಟುನಿಟ್ಟಿನ ನಿಯಮಗಳು ಹಲವು ಮಾರ್ಗಸೂಚಿಗಳ ಜೊತೆ ಶಿಬಿರ ಪುನರಾರಂಭಕ್ಕೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ಬಳಿಕ ಸಕ್ರೆಬೈಲು ಆನೆ ಬಿಡಾರ ಪುನರಾರಂಭಗೊಳ್ಳಲಿದೆ.

ಸಾರ್ವಜನಿಕರಿಗೆ ಮತ್ತು ಆನೆಗಳಿಗೆ ಪ್ರತ್ಯೇಕ ಮಾರ್ಗಗಳನ್ನು ಗುರುತು ಸಾರ್ವಜನಿಕರು ಮತ್ತು ಆನೆಗಳ ನಡುವೆ ನೇರ ಸಂಪರ್ಕವಿಲ್ಲದಂತೆ ಹಾಗೂ ಪ್ರವಾಸಿಗರ ಮಾಹಿತಿ ಮತ್ತು ಜಾಗೃತಿಗಾಗಿ ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸುವ ಮೂಲಕ ಇದೇ
ಸೆ. 26 ರಿಂದ ಸಕ್ರೆಬೈಲು ಆನೆ ಬಿಡಾರ ಪುನರಾರಂಭಗೊಳ್ಳಲಿದೆ.

Spread the love

You may also like

Leave a Comment