93
ಶಿವಮೊಗ್ಗ: ಶಿವಮೊಗ್ಗದ ಸಾಗರ ರಸ್ತೆಯ ತ್ಯಾವರೆಕೊಪ್ಪದಲ್ಲಿರು ಹುಲಿ ಮತ್ತು ಸಿಂಹಧಾಮದಲ್ಲಿದ್ದ ಸಾರಾ ಹೆಸರಿನ ಸಿಂಹಿಣಿಯೊಂದು ನಾಲ್ಕು ಮರಿಗಳಿಗೆ ಜನುಮ ನೀಡಿತ್ತು,
ಆದರೆ ಜನ್ಮ ನೀಡಿದ ಒಂದೇ ದಿನಕ್ಕೆ ನಾಲ್ಕೂ ಮರಿಗಳು ಸಾವನ್ನಪ್ಪಿರುವ ಸುದ್ದಿ ಇದೀಗ ಕೇಳಿ ಬರುತ್ತಿದೆ, ಇದೇ ಮೊದಲ ಬಾರಿಗೆ ಗರ್ಭಿಣಿಯಾಗಿದ್ದ ‘ಸಾರಾ’ ಸಿಂಹಿಣಿಯು ಮರಿಗಳ ಪೋಷಣೆಯಲ್ಲಿ ನಿರ್ಲಕ್ಷ್ಯ, ತೋರಿದೆ ಎಂದು ಹೆಳಲಾಗುತ್ತಿದೆ.
ಮರಿಗಳಿಗೆ ಸರಿಯಾಗಿ ಹಾಲು ನೀಡುತ್ತಿರಲಿಲ್ಲ. ಹಿಗಾಗಿತಾಯಿಯ ನಿರ್ಲಕ್ಷ್ಯದಿಂದಲೇ ಮರಿಗಳು ಸಾವನ್ನಪ್ಪಿರುವ ಶಂಕೆಯನ್ನು ತ್ಯಾವರೆಕೊಪ್ಪ ಸಿಂಹಧಾಮದ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲದಿನಗಳ ಹಿಂದಷ್ಟೆ ಗರ್ಭೀಣಿ ನಿರಾನೆ ಸಾವಿನ ಬೆನ್ನಲ್ಲೆ
ಸಿಂಹದ ಮರಿಗಳ ಸಾವಿನ ವಿಚಾರ ಇದೀಗ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

