Home ಅಪರಾಧ ಭದ್ರಾವತಿ ವಿಐಎಸ್ಎಲ್ ಎಜಿಎಂ ಗೋವಿಂದ್ ರಾಜು ಆತ್ಮಹತ್ಯೆಗೆ ಶರಣು.

ಭದ್ರಾವತಿ ವಿಐಎಸ್ಎಲ್ ಎಜಿಎಂ ಗೋವಿಂದ್ ರಾಜು ಆತ್ಮಹತ್ಯೆಗೆ ಶರಣು.

by Mahesh malenaadu

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ವಿಐಎಸ್ಎಲ್ ಕಾರ್ಖಾನೆಯಲ್ಲಿ ಕಳೆದ 10-12 ವರ್ಷಗಳಿಂದ ಎಜಿಎಂ ಆಗಿ ಕೆಲಸ ನಿರ್ವಹಿಸುತ್ತಿದ್ದ ಗೋವಿಂದರಾಜ್ (52) ಆತ್ಮಹತ್ಯೆಗೆ ಶರಣಾಗಿದ್ದಾರೆ,

ಗೋವಿಂದರಾಜ್ ರವರು ಸೇಲಂ ಮೂಲದವರಾಗಿದ್ದು ವಿಐಎಸ್ಎಲ್ ಕಾರ್ಖಾನೆಯಲ್ಲಿ ಎಜಿಎಂ ಆಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು.

ಭಾನುವಾರ ಮಧ್ಯಾಹ್ನ 3 ಗಂಟೆಗೆ ಅವರ ಪತ್ನಿಯನ್ನು ರೈಲಿಗೆ ಕಳಿಸಿ ರಾತ್ರಿ ಮನೆಗೆ ವಾಪಾಸ್ಸಾಗಿದ್ದ ಗೋವಿಂದ ರಾಜು, ಸೋಮವಾರ ಬೆಳಿಗ್ಗೆ 8 ಗಂಟೆಗೆ ಅವರ ಸ್ನೇಹಿತರಿಗೆ ಮೆಸೆಜ್ ಕೂಡ ಮಾಡಿದ್ದರು.

ಕಾರ್ಖಾನೆಯಲ್ಲಿ ಕಡತಗಳಿಗೆ ಸಹಿ ಹಾಕಬೇಕಿದ್ದ ಎಜಿಎಂ ಗೋವಿಂದ ರಾಜು ಕಾರ್ಖಾನೆ ಅಧಿಕಾರಿಗಳು ಫೋನ್ ಕರೆ ಮಾಡಿದರೂ ರಿಸೀವ್ ಮಾಡಿರಲಿಲ್ಲ‌.

ವಿದ್ಯುತ್ ಮೀಟರ್ ರೀಡರ್ ಕೂಡ ಬಂದು ಮನೆಯ ಬಾಗಿಲು ತಟ್ಟಿದ್ದ , ಆದರೂ ಕೂಡ ಗೋವಿದ್ ರಾಜು ಮನೆಯ ಬಾಗಿಲು ತೆರೆದಿರಲಿಲ್ಲ,
ಕೊನೆಗೆ ಕಾರ್ಖಾನೆ ಅಧಿಕಾರಿಗಳು ಮನೆಗೆ ಬಂದು ಬಾಗಿಲು ತೆರೆದು ನೋಡಿದಾಗಲೇ ವಿಷಯ ಬೆಳಕಿಗೆ ಬಂದಿದೆ.

ವಿ,ಐ,ಎಸ್,ಎಲ್ ಅಧಿಕಾರಿಯಾಗಿದ್ದ ಎ ಜಿ ಎಂ ಅಧಿಕಾರಿ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಇನ್ನು ಸ್ಥಳಕ್ಕೆ ಭೇಟಿ ನೀಡಿದ ನ್ಯೂಟೌನ್ ಪೊಲೀಸರ ಸ್ಥಳ ಪರಿಶೀಲನೆ ನಡೆಸಿದ್ದಾರೆ.

Spread the love

You may also like

Leave a Comment