Home Uncategorized ರಾಗಿಗುಡ್ಡದಲ್ಲಿ ಪಾರ್ಕ್ ನಿರ್ಮಾಣಕ್ಕೆ ಸೂಡಾ ಅಧ್ಯಕ್ಷರಿಗೆ ಶಾಂತಿನಗರ ನಾಗರೀಕ ಹಕ್ಕುಗಳ ವೇದಿಕೆ ಮನವಿ

ರಾಗಿಗುಡ್ಡದಲ್ಲಿ ಪಾರ್ಕ್ ನಿರ್ಮಾಣಕ್ಕೆ ಸೂಡಾ ಅಧ್ಯಕ್ಷರಿಗೆ ಶಾಂತಿನಗರ ನಾಗರೀಕ ಹಕ್ಕುಗಳ ವೇದಿಕೆ ಮನವಿ

by Mahesh malenaadu

 

ಶಿವಮೊಗ್ಗ: ಶಾಂತಿನಗರ ನಾಗರೀಕ ಹಕ್ಕುಗಳ ವೇದಿಕೆ ವತಿಯಿಂದ ಶಿವಮೊಗ್ಗ ಭದ್ರಾವತಿ ನಗರಭಿರುದ್ದಿ ಪ್ರಾಧಿಕಾರಕ್ಕೆ ನೂತನವಾಗಿ ಅಧ್ಯಕ್ಷರಾದ ಶ್ರೀ ಮಧುಸೂಧನ್ ಸಿ ಜಿ ರವರನ್ನು ಈದಿನ ಭೇಟಿಮಾಡಿ ಶುಭಕೋರಲಾಯಿತು.ಹಾಗೂ ಇದೆ ಸಂಧರ್ಭದಲ್ಲಿ ಶಾಂತಿನಗರದಲ್ಲಿ ಜನತೆಯ ಅನುಕೂಲಕ್ಕಾಗಿ ಪಾರ್ಕ್ ನಿರ್ಮಾಣ ಮಾಡಿ ಕೊಡುವಂತೆ ವೇದಿಕೆ ಅಧ್ಯಕ್ಷರಾದ ಸಯ್ಯದ್ ಮುಜಿಬುಲ್ಲ ನೇತೃತ್ವದಲ್ಲಿ ಮನವಿಸಲ್ಲಿಸಲಾಯಿತು. ಶಾಂತಿನಗರದ ಸಾರ್ವಜನಿಕರಿಗೆ ವಾಯುವಿಹಾರ,ವಿಶ್ರಾಂತಿ ಮತ್ತು ಮಕ್ಕಳಿಗೆ ಅಟವಾಡಲು ಪಾರ್ಕಿನ ಅವಶ್ಯಕತೆ ಇರುವಬಗ್ಗೆ ಮನವರಿಕೆ ಮಾಡಿ ಕೊಡಲಾಯಿತು.
ಈ ಸಂಧರ್ಭದಲ್ಲಿ ಪ್ರಾಧಿಕಾರದ ಅಧ್ಯಕ್ಷರು ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷರಾದ ಕಿರಣಕುಮಾರ್ ಎಚ್ ಎಸ್, ಕಾರ್ಮಿಕ ಮುಖಂಡ ಅಪ್ಸರ್ ಭಾಷಾ, ಶಾಂತಿನಗರದ ಮುಖಂಡರಾದ ಪ್ರಸನ್ನಕುಮಾರ್, ನೂರುಲ್ಲಖಾನ್, ಕರವೇ ಸಾದಿಕ್, ಸುಭಾನ್, ಸಯ್ಯದ್ ಶಫಿ ಮೊದಲಾದವರಿದ್ದರು

Spread the love

You may also like

Leave a Comment