Home Uncategorized ನವರಾತ್ರಿ ಉತ್ಸವದ ಸಿದ್ಧತೆಗಾಗಿ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಅರ್ಚಕ ಸಾವು

ನವರಾತ್ರಿ ಉತ್ಸವದ ಸಿದ್ಧತೆಗಾಗಿ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಅರ್ಚಕ ಸಾವು

by Mahesh malenaadu

ಹೊಸನಗರ: ತಾಲೂಕಿನ ಯಡೂರು ಸಮೀಪದ ಕರಿಗಲ್ಲು ಗ್ರಾಮದಲ್ಲಿ ಘಟನೆ ನಡೆದಿದೆ

ಉಳ್ತಿಗಾ ಗ್ರಾಮದ ಮೇಲುಸುಂಕ ನಿವಾಸಿ ಶೇಷಾಚಲ ಭಟ್ಟ (61) ಮೃತಪಟ್ಟ ದುರ್ದೈವಿ ಅರ್ಚಕನಾಗಿದ್ದು, ದೇವಸ್ಥಾನದಲ್ಲಿ ನಡೆಯುವ ನವರಾತ್ರಿ ಉತ್ಸವಕ್ಕೆ ಸಿದ್ಧತೆ ಮಾಡಲು ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಮನೆಯಿಂದ ದೇವಸ್ಥಾನಕ್ಕೆ ಸ್ಕೂಟಿಯಲ್ಲಿ ತೆರಳುತ್ತಿದ್ದ ಅರ್ಚಕ
ಕರಿಗಲ್ಲು ಗ್ರಾಮದ ಬಳಿ ಸಾಗುತ್ತಿದ್ದ ವೇಳೆ ಸ್ಕೂಟಿ ಪಲ್ಟಿ ಹೊಡೆದಿದೆ, ಮಳೆಯಿದ್ದ ಕಾರಣಕ್ಕೆ ತಿರುವಿನಂಚಿನಲ್ಲಿ ಸ್ಕೂಟಿ ಸ್ಕಿಡ್ ಆಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.

ಅಪಘಾತದಲ್ಲಿ ಶೇಷಾಚಲ ಭಟ್ಟ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು ತೀವ್ರ ರಕ್ತಸ್ರಾವ ಉಂಟಾಗಿ ಸ್ಥಳದಲ್ಲಿಯೇ ಅರ್ಚಕು ಸಾವನ್ನಪ್ಪಿದ್ದಾರೆ.
ಘಟನೆ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲು

Spread the love

You may also like

Leave a Comment