Home Uncategorized ಬಸವ ಪುರಸ್ಕೃತ ಸಿ ಎಸ್ ಷಡಾಕ್ಷರಿ ಹಾಗೂ ನೂತನ ಸೂಡ ಅಧ್ಯಕ್ಷ ಮಧುಸೂದನ್ ರವರಿಗೆ ಅಭಿನಂದನಾ ಸಮಾರಂಭ.

ಬಸವ ಪುರಸ್ಕೃತ ಸಿ ಎಸ್ ಷಡಾಕ್ಷರಿ ಹಾಗೂ ನೂತನ ಸೂಡ ಅಧ್ಯಕ್ಷ ಮಧುಸೂದನ್ ರವರಿಗೆ ಅಭಿನಂದನಾ ಸಮಾರಂಭ.

by Mahesh malenaadu

ಶಿವಮೊಗ್ಗ: ನಗರದ ನೆಹರು ಕ್ರೀಡಾಂಗಣದಲ್ಲಿ ಪ್ರತಿದಿನ ವಾಕಿಂಗ್ ಮಾಡುವ ಸ್ಟೇಡಿಯಂ ಬಳಗದ ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ವಿಶೇಷ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ಅವರಿಗೆ ಬೆಂಗಳೂರಿನಲ್ಲಿ ಇತ್ತೀಚೆಗೆ ಬಸವ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಕ್ರೀಡಾಂಗಣದ ಎಲ್ಲಾ ಸ್ನೇಹಿತರ ಪರವಾಗಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಯಿತು. 🌹

ಇದೇ ಸಂದರ್ಭದಲ್ಲಿ ಶಿವಮೊಗ್ಗ ನಗರದ ಸೂಡಾ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಿವಮೊಗ್ಗದ ಯುವ ನಾಯಕ ಶ್ರೀ ಮಧುಸೂದನ್ ಅವರಿಗೂ ಕ್ರೀಡಾಂಗಣದ ಎಲ್ಲಾ ಸ್ನೇಹಿತರ ಪರವಾಗಿ ಆತ್ಮೀಯ ಅಭಿನಂದನೆಗಳನ್ನು ಸಲ್ಲಿಸಲಾಯಿತು. 💐

ಈ ಸಂದರ್ಭದಲ್ಲಿ ನೆಹರು ಕ್ರೀಡಾಂಗಣದಲ್ಲಿ ಪ್ರತಿದಿನ ವಾಕಿಂಗ್ ಮಾಡುವ ಹಿರಿಯರು ಹಾಗೂ ಕಿರಿಯರ ಅನುಕೂಲಕ್ಕಾಗಿ:

* ಕುಳಿತುಕೊಳ್ಳಲು ಅಗತ್ಯವಾದ ಬೆಂಚ್‌ಗಳ ವ್ಯವಸ್ಥೆ
* ಮಿನಿ ಜಿಮ್
* ಹಿರಿಯ ನಾಗರಿಕರಿಗಾಗಿ ಸಾಧಾರಣ ಜಿಮ್ ಉಪಕರಣಗಳ ವ್ಯವಸ್ಥೆ

ಮಾಡಿಕೊಡುವಂತೆ ಸೂಡಾ ಅಧ್ಯಕ್ಷರಾದ ಶ್ರೀ ಮಧುಸೂದನ್ ಅವರಿಗೆ ಕ್ರೀಡಾಂಗಣದ ಎಲ್ಲಾ ಸ್ನೇಹಿತರ ಪರವಾಗಿ ಮನವಿ ಮಾಡಲಾಯಿತು.

ಕಾರ್ಯಕ್ರಮದಲ್ಲಿ ನೆಹರು ಕ್ರೀಡಾಂಗಣದ ವಾಕಿಂಗ್ ಬಳಗದ ಹಿರಿಯರು, ಕಿರಿಯರು ಹಾಗೂ ಎಲ್ಲಾ ಆತ್ಮೀಯ ಸ್ನೇಹಿತರು ಉಪಸ್ಥಿತರಿದ್ದರು

Spread the love

You may also like

Leave a Comment