ಶಿವಮೊಗ್ಗ : ನಾಡಹಬ್ಬ ದಸರಾ ಕಾರ್ಯಕ್ರಮದಲ್ಲಿ ರಾಜಕೀಯದ ಹೈ ಡ್ರಾಮನಡೆದಿದೆ. ರಾಜ್ಯ ಸರ್ಕಾರದ ಆದೇಶದಂತೆ ವಂದೇಮಾತರಂ ಗೀತೆ ಎರಡು ಚರಣ ಮಾತ್ರ ಹಾಡಬೇಕಿತ್ತು, ಆದರೆ ಪೂರ್ತಿ ಹಾಡಿ ರಾಜ್ಯ ಸರ್ಕಾರದ ಆದೇಶ ಪಾಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೇಸ್ ಮುಖಂಡರು ಪಾಲಿಕೆ ಕಮಿಷನರ್ ಮುಂಭಾಗವೇ ಪೂರ್ತಿ ವಂದೇಮಾತರಂ ಗೀತೆ ಹಾಡಿದ್ದಕ್ಕೆ ಆಕ್ರೋಶ ಹೊರಹಾಕಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿಗಳ ಉಪಸ್ತಿತಿಯಲ್ಲಿ ತಿರ್ಥಹಳ್ಳಿಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಜಿಜೆಪಿ ಮುಖಂಡರು ಇದೇ ವಂದೇ ಮಾತರಂ ಗಾಯನದ ಚರಣದ ವಿಚಾರವಾಗಿ ಸಭಾ ತ್ಯಾಗ ಮಾಡಿದ್ದರು , ಇಂದು ಅವರಿಗೆ ಇದು ಪ್ರತ್ಯುತ್ತರ ಎಂದು ಕಾಂಗ್ರೇಸ್ ಜಿಲ್ಲಾಧ್ಯಕ್ಷ ಹೆ ಸಿ ಯೋಗಿಶ್ ಗುಡುಗಿದ್ದಾರೆ.
ಅಲ್ಲದೆ ಪೂರ್ತಿಗಾಯನ ಹಾಡಲು ಅವಕಾಶ ಮಾಡಿಕೊಟ್ಟ ಪಾಲಿಕೆ ಆಯುಕ್ತರನ್ನು ಅಮಾನತು ಮಾಡುವಂತೆ ಆಗ್ರಹ ವ್ಯಕ್ತ ಪಡಿಸಿದ್ದಾರೆ.
ಕಾಂಗ್ರೇಸ್ ಮುಖಂಡರ ಬಾಯ್ ಕಟ್ ವಿಚಾರವಾಗಿ ಮಾತನಾಡಿರುವ ಶಾಸಕ ಚನ್ನಬಸಪ್ಪ ಕಾಂಗ್ರೆಸ್ ನವರಿಗೆ ಭಯ ಇದೆ ನಾನೇನು ಮಾಡಲಿ ಹೇಳಿ, ತ್ವಮಿ ದುರ್ಗಾ ದಶ ಪ್ರಹಾರಣಿ ಎಂದು ಕಾಂಗ್ರೆಸ್ ನವರ ಬಾಯಲ್ಲಿ ಬಂದರೆ ಮುಸಲ್ಮಾನರಿಗೆ ನೋವಾಗುತ್ತೆ ಎಂಬ ಕಾರಣಕ್ಕಾಗಿ ದಸರಾ ಬಿಟ್ಟು ಹೋಗುತ್ತಾರೆಂದರೆ ಇದ್ದಕ್ಕಿಂತ ದುರ್ದೈವದ ಸಂಗತಿ ಮತ್ತೊಂದಿಲ್ಲ ತಾಯಿ ಭಗವತಿಯೇ ಕಾಂಗ್ರೆಸ್ ನವರಿಗೆ ಬುದ್ಧಿ ನೀಡಬೇಕುಎಂದು ಟೀಕಿಸಿದ್ದಾರೆ.
ಪಾಲಿಕೆ ಕಮಿಷನರ್ ಗೆ ಟ್ರಾನ್ಸಫರ್ ಮಾಡಿಸುತ್ತೆವೆಂಬ ಪ್ರಶ್ನೆಯೇ ಇಲ್ಲ ಯಾರು ದೇಶಭಕ್ತರಿದ್ದಾರೋ ಅವರನ್ನು ವರ್ಗಾಯಿಸುವ ಪ್ರಶ್ನೆ ಇಲ್ಲ
ವಂದೇಮಾತರಂ ಗೀತೆ ಹಾಡಬೇಕು ಬೇಡ ಎಂದು ತೀರ್ಮಾನ ಮಾಡೋದು ದೇಶದ ಜನ ಕಮಿಷನರ್ ಅಲ್ಲ
ಜನರಿಗೆ ಅನಿಸ್ತು ಪೂರ್ಣ ಗೀತೆ ಹಾಡಬೇಕು ಅಂತಾ ಅವರು ಹಾಡಿದ್ರು ಇಲ್ಲಿ ಯಾವೂದೆ
ರೆಕಾರ್ಡ್ ಹಾಕಲಾಗಿದ್ದ ಮೈಕ್ ಸರ್ಕಾರದ ಆದೇಶದಂತೆ ನಿಂತಿದೆ ಎಂದು ತಮ್ಮ ನಿಲುವು ಹೊರಹಾಕಿದರು.

