ನಾಡಹಬ್ಬ ದಸರಾ ಆರಂಭವಾಗಿದೆ. ನವರಾತ್ರಿ ರಂಗು ಎಲ್ಲೆಡೆ ಆವರಿಸಿದೆ. ಅಂದಹಾಗೆ, ಶಿವಮೊಗ್ಗ ಮಹಾನಗರ ಪಾಲಿಕೆವತಿಯಿಂದ ಆಯೋಜಿಸಿರುವ ದಸರಾ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ಚಾಮುಂಡೇಶ್ವರಿ ಬೆಳ್ಳಿ ವಿಗ್ರಹವನ್ನು ಮಹಾನಗರ ಪಾಲಿಕೆ ಆವರಣದಿಂದ ನಗರದ ಕೋಟೆ ರಸ್ತೆಯ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಮೆರವಣಿಗೆ ಮೂಲಕ ತಂದು ಪ್ರತಿಷ್ಟಾಪನೆ ಮಾಡಲಾಯಿತು. ಮೊದಲಿಗೆ ಕೋಟೆ ರಸ್ತೆಯ ಚಂಡಿಕಾ ಪರಮೇಶ್ವರಿ ಮೂಲಮೂರ್ತಿಗೆ ಪೂಜೆ ಸಲ್ಲಿಸಿ ನಂತರ ತಾಯಿ ಚಾಮುಂಡೆಶ್ವರಿಯ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು.
ಬಳಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಲನಚಿತ್ರ ಖ್ಯಾತ ನಟ, ಪ್ರಣಯರಾಜ ಶ್ರೀನಾಥ್, ಮೈಸೂರು ಹೊರತುಪಡಿಸಿದರೆ, ಶಿವಮೊಗ್ಗದಲ್ಲೇ ಬಹಳ ಚೆನ್ನಾಗಿ ನಡೆಯುತ್ತದೆ ಎಂದು ಕೇಳಿದ್ದೆ, ಈಗ ಇಲ್ಲಿ ಬಂದಾಗ ನನಗೆ ಗೊತ್ತಾಗಿದೆ. ಎಲ್ಲರೂ ಬಹಳ ಚೆನ್ನಾಗಿ ದಸರೆ ಆಚರಿಸುತ್ತಿದ್ದಾರೆ. ಬಹಳ ಖುಷಿಯಾಯ್ತು. ಕನ್ನಡ ನಾಡಿನಲ್ಲಿ ದಸರಾ ಆಚರಣೆ ತನ್ನದೇ ಆದ ಮಹತ್ವವಿದೆ. ಅದರಂತೆ, ದಸರಾ ಆಚರಣೆ ಕಣ್ಮನ ಸೆಳೆದಿದೆ ಎಂದ ಶ್ರೀನಾಥ್.
ಇನ್ನು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಂಸರ ಬಿ.ವೈ.ರಾಘವೇಂದ್ರ, ಶಾಸಕರಾದ ಚನ್ನಬಸಪ್ಪ, ಕಾಂಗ್ರೇಸ್ ಜಿಲ್ಲಾಧ್ಯಕ್ಷರಾದ ಹೆಚ್ .ಸಿ.ಯೋಗಿಶ್. ಸೂಡಾ ಅಧ್ಯಕ್ಷ ಮಧುಸೂದನ್, ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ಸೇರಿದಂತೆ ಪಾಲಿಕೆ ಮಾಜಿ ಸದಸ್ಯರುಗಳು ಭಾಗವಹಿಸಿದ್ದರು.

