49
ಶಿವಮೊಗ್ಗ: ನಗರದಲ್ಲಿ ಐತಿಹಾಸಿಕ ದೂರ್ವಾಸ ಮುನಿದ್ಥಾಪಿತ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನವು 4000 ವರ್ಷಗಳ ಇತಿಹಾಸ ಹೊಂದಿದ್ದು ಈ ದೇವಸ್ಥಾನಕ್ಕೆ ರಾಜ್ಯ ಮಾತ್ರವಲ್ಲದೆ ದೇಶ ವಿದೇಶಗಳಿಂದ ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸುತ್ತಾರೆ.
ಶಿವಮೊಗ್ಗ ನಗರ ಬೆಳೆಯುತ್ತಿದ್ದಂತೆ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ದೇವಾಲಯಕ್ಕೆ ಆಗಮಿಸಲು ಮಾರ್ಗದ ಸಮಸ್ಯೆ ಎದುರಾಗುತ್ತಿದೆ.
ಈ ಹಿನ್ನೆಲೆ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ದೆವಸ್ಥಾನಕ್ಕೆ ಬರುವ ಮಾರ್ಗ ಸುಗಮವಾಗಲು ನಗರದ ಹೊಳೆ ಬಸ್ಟಾಪ್ ಬಳಿಯ ಬೆಕ್ಕಿನ ಕಲ್ಮಟ ಪಕ್ಕದ ದೇವಾಲಯಕ್ಕೆ ಬರುವ ರಸ್ತೆಯಲ್ಲಿ ದ್ವಾರ ಭಾಗಿಲು ನಿರ್ಮಿಸಿಕೊಡುವಂತೆ ಶಿವಮೊಗ್ಗ ಭದ್ರಾವತಿ ಪ್ರಾಧಿಕಾರದ ಅಧ್ಯಕ್ಷರಾದ ಸಿ ಜಿ ಮಧುಸೂದನ್ ರವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭ ದೇವಸ್ಥಾನದ ವ್ಯವಸ್ಥಾಪಕ ಅಧ್ಯಕ್ಷರಾದ ಕೆ ದೇವೇಂದ್ರಪ್ಪ, ಕರ್ನಾಟಕ ರಾಜ್ಯ ಜವಳಿ ನಿಗಮದ ಅಧ್ಯಕ್ಷರಾದ ಕೆ ಚೇತನ್. ಸಮಿತಿಯ ಸದಸ್ಯರಾದ ಆರ್ ಶೇಖರ್. ರೇಖಾ ರಂಗನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

