66
ಸಾಗರ ರಸ್ತೆಯ ಗಂಗಮ್ಮ ದೇವಸ್ಥಾನದ ರಿಂಗ್ ರಸ್ತೆಬಳಿ ವಾಕಿಂಗ್ ತೆರಳಿದ್ದ ಶಾಲಾ ಶಿಕ್ಷಕಿಗೆ ಹಿಂಬದಿಯಿಂದ ಕಾರೋಂದು ಬಂದು ಡಿಕ್ಕಿಹೊಡೆದಿರುವ ಘಟನೆ ನಡೆದಿದೆ.
ಡಿಕ್ಕಿ ಹೊಡೆದು ಕಾರನ್ನು ನಿಲ್ಲಿಸದೆ ಪರಾರಿಯಾಗುತ್ತಿದ್ದ ಚಾಲಕನನ್ನು ಸಾರ್ವಜನಿಕರು ಕಾರು ಬೆನ್ನಟ್ಟಿ ಹಿಡಿದಿದ್ದಾರೆ,
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಫ್ರೊಫೆಸರ್ ಅವಿನಾಶ್ ಪತ್ನಿಯಾದ ರೂಪಾ(41) ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಘಟನೆ ಕುರಿತು ತುಂಗಾ ನಗರ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.

