Home Uncategorized ರಾಜ್ಯ ಮಟ್ಟದ ಸಮಗಾರ ಸಮಾಜದ ವಧು ವರರ ಸಮಾವೇಶ ಉದ್ಘಾಟಿಸಿದ ಬೇಳೂರು,

ರಾಜ್ಯ ಮಟ್ಟದ ಸಮಗಾರ ಸಮಾಜದ ವಧು ವರರ ಸಮಾವೇಶ ಉದ್ಘಾಟಿಸಿದ ಬೇಳೂರು,

by Mahesh malenaadu

 

ಶಿವಮೊಗ್ಗ ಜಿಲ್ಲಾ ಸಮಗಾರ ಸಂಘ (ರಿ), ಶಿವಮೊಗ್ಗ ಜಿಲ್ಲಾ ಸಮಗಾರರ ಹಿತರಕ್ಷಣಾ ವೇದಿಕೆ, ಶಿವಮೊಗ್ಗ ಸಮಗಾರ ಪತ್ತಿನ ಸಹಕಾರ ಸಂಘ ನಿ, ಶಿವಮೊಗ್ಗ.
ಸಮಗಾರ ವಧು-ವರರ ವೇದಿಕೆ, ಶ್ರೀ ಪಾಂಡುರಂಗ ಯುವಕ ಸಂಘ, ದಾಸಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ.

11/10/2026ರ ಭಾನುವಾರ ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕು, ಆನಂದಪುರ ಸೀತಾರಾಮ ಕಲ್ಯಾಣ ಮಂಟಪದಲ್ಲಿ, ಪ್ರಪ್ರಥಮ ರಾಜ್ಯ ಮಟ್ಟದ ಸಮಗಾರ ಸಮಾಜದ ವಧು-ವರರ ಬೃಹತ್ ಸಮಾವೇಶ ಕಾರ್ಯಕ್ರಮವನ್ನು, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಸಾಗರ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬೇಳೂರು ಗೋಪಾಲಕೃಷ್ಣ ರವರು ಉಧ್ಘಾಟಿಸಿದರು.

ಸಮಗಾರ ಸಮಾಜದ ಇಷ್ಟು ಜನಕಂಡು ಸಂತೋಷವಾಗುತ್ತಿದೆ. ಸಮಾಜದವರು ಗಟ್ಟಿಧ್ವನಿಯಿಂದ ಕೇಳಿದರೆ ಮಾತ್ರ ಸರ್ಕಾರಕ್ಕೆ ಮುಟ್ಟುವುದು, ಸಮಾಜ ಉನ್ನತಿಗೆ ಹೋಗಬೇಕಾದರೆ ಸಮಾಜದ ಜನರು ಎಲ್ಲರೂ ಒಟ್ಟಿಗೆ ಇರಬೇಕು. ಸಮಾಜವನ್ನು ಉನ್ನತಿಗೆ ಹೋಗಲು ಆರ್ಥಿಕ ಪ್ರಬಲಗೊಳ್ಳಲು ಸಹಕಾರ ಸಂಘ ಒಳ್ಳೆ ಬೆಳವಣಿಗೆ, ಸಮಾಜದ ಇಂತಿಷ್ಟು ಜನ ಯಾರು ಉದ್ಯೋಗದಲ್ಲಿ ಇದ್ದೀರಿ, ಯಾರು ಹಣವಂತರು ಇದ್ದೀರಿ ಅವರು ಸಮಾಜದ ಬೆಳವಣಿಗೆಗೆ ಕೈಜೋಡಿಸಬೇಕು. ಸಮಾಜದ ಬಲಿಷ್ಠರು ತಮ್ಮ ಸಮಾಜದ ಬಗ್ಗೆ ಧ್ವನಿ ಎತ್ತಬೇಕು. ಬರೆ ಸರ್ಕಾರ ಮಾಡುತ್ತೆ ಅಂತ ಯಾರು ಕುಳಿತುಕೊಳ್ಳಬಾರದು ಸಮಾಜದ ಬಲಿಷ್ಠ ಜನರು, ಹಣವಂತರು, ಸಮಾಜದ ಏಳಿಗೆಗೆ ಕೈಜೋಡಿಸಿದಾಗ ಮಾತ್ರ ಸಮಾಜ ಬೆಳೆಯುತ್ತದೆ, ಸರ್ಕಾರದ ಅನುದಾನವನ್ನು ಕಾಯುತ್ತ ಕುಳಿತರೆ ಯಾವ ಬೆಳವಣಿಗೆ ಕಾಣಲು ಸಾಧ್ಯವಿಲ್ಲ.

ಹಿಂದೆ ಉಳಿ ಅಮ್ಮರ್ ತಿಂದು ಬದುಕಿದವರು ನಾವು ಇಂದು ಸಮಾನತೆ ಕಾಣುತ್ತಿದ್ದೇವೆ. ಸಮಾನತೆಯ ಕೊಟ್ಟಿರುವ ದೇಶವೆಂದರೆ ನಮ್ಮ ದೇಶ ಮಾತ್ರ ಎಲ್ಲರಿಗೂ ಸಮಾನತೆ ಹಕ್ಕು ಕೊಟ್ಟಿದೆ. ಹಕ್ಕನ್ನು ಕೊಡಿಸಲು ಶ್ರಮಿಸಿದ ಆ ಪುಣ್ಯಾತ್ಮನನ್ನು ಮರೆಯಬೇಡಿ, ಎಲ್ಲಾ ಸಮುದಾಯದರಿಗೂ ಒಂದು ಸಮುದಾಯ ಭವನಗಳಿವೆ ಆದರೆ ಶಿವಮೊಗ್ಗ ಜಿಲ್ಲಾ ಸಮಗಾರ ಸಂಘಕ್ಕೆ ಒಂದು ಜಾಗವು ಇಲ್ಲದೇ ಇರುವುದು ವಿಷಾದನೆಯ ಹಾಗಾಗಿ ನಾನು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಮಾತಾಡಿ ಶಿವಮೊಗ್ಗ ಜಿಲ್ಲಾ ಸಮಗಾರ ಸಂಘಕ್ಕೆ ಜಾಗವನ್ನು ನೀಡಲು ವಾಗ್ದಾನ ಮಾಡುತ್ತೇನೆ. ಅಲ್ಲಿ ಕಲ್ಯಾಣ ಮಂಟಪ ಆಗಬೇಕು, ಮಕ್ಕಳಿಗೆ ಶಿಕ್ಷಣ ದೊರೆಯಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಿಮಿಸಿದ ಶಿವಮೊಗ್ಗ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷರು ಸನ್ಮಾನ್ಯ ಶ್ರೀ ಆರ್.ಎಂ. ಮಂಜುನಾಥ ಗೌಡ ರವರು, ನಿಮ್ಮ ಪತ್ತಿನ ಸಹಕಾರ ಸಂಘಕ್ಕೆ ನಮ್ಮ ಸಹಕಾರ ಸಂಘದಿಂದ ಎಲ್ಲಾ ಸವಲತ್ತು ನೀಡುವ ಬಗ್ಗೆ ಹೇಳಿದರು.

50 ವರ್ಷದ ಹಿಂದೆ ಎಲ್ಲಾ ಕಷ್ಟ ಇತ್ತು ಈಗ ಆರ್ಥಿಕವಾಗಿ ಸಾಮಾಜಿಕವಾಗಿ ಒಂದು ಹಂತಕ್ಕೆ ಬರ್ತಾ ಇದೆ, ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುವ ಕಾಲವಿತ್ತು ಇವತ್ತು ಕಾಲ ಬದಲಾಗುತ್ತಿದೆ, ಆನಂದಪುರ ಹೊನಗೋಡು ಮಾಜಿ ಜಿಲ್ಲಾ ಪಂ. ಸದಸ್ಯರು, ಶ್ರೀ ರತ್ನಾಕರ್ ರವರು ಹೇಳಿದರು.

ಶಿವಮೊಗ್ಗ ಜಿಲ್ಲಾ ಸಮಗಾರ ಸಂಘದ ಅಧ್ಯಕ್ಷರು ಶ್ರೀ ವೆಂಕಟರಮಣ ಹೊನ್ನಾವರ್ಕರ್ ಸಮಾಜದ ಏಳುಬಿಳಿನ, ಸಮಾಜ ಕಟ್ಟುವ ಶ್ರಮದ ಬಗ್ಗೆ ಇಲ್ಲಿವರೆಗೂ ಶ್ರಮಿಸಿದ ಸಮಾಜದ ಮುಖಂಡರ ಬಗ್ಗೆ ಮಾಹಿತಿಯನ್ನು ನೀಡಿದರು.

ಶಿವಮೊಗ್ಗ ಸಮಗಾರ ಪತ್ತಿನ ಸಹಕಾರ ಸಂಘ ನಿ. ಅಧ್ಯಕ್ಷರು ಶ್ರೀ ಶಿವಾನಂದ ಹೊನ್ನಾವರ್ಕರ್
ಪತ್ತಿನ ಸಹಕಾರ ಮಾಡುವಲ್ಲಿ ಸಮಾಜದ ಜನರ ಸದಸ್ಯರು ಬಳಿ ಶೇರ್ ಕೇಳುವಾಗ ನಮ್ಮ ಜಿಲ್ಲೆಯಲ್ಲಿ ವಧು-ವರರ ಸಮಾವೇಶ ಸೊಸೈಟಿ ಆರಂಭಿಸಿ ನಂತರ ಪ್ರಾರಂಭ ಮಾಡುವುದಾಗಿ ಎಂದು ಹೇಳುತ್ತ ಬಂದಿದ್ದು ಸೊಸೈಟಿ ಉಧ್ವಾಟನಾ ಸಮಾರಂಭದಂದೆ ವಧು ವರರ ಸಮಾವೇಶ ಮಾಡುತ್ತಿರುವೇವು, ಶೇರನ್ನು ಸಂಗ್ರಹಿಸುವಾಗ ಜನಗಳಿಗೆ ನಾವು ನಿಮ್ಮ ಬೇಡಿಕೆಯಂತೆ ಎರಡು ತಿಂಗಳಲ್ಲಿ ವಧು-ವರರ ಸಮಾವೇಶ ಮಾಡ್ತೀವಿ ಅಂತ ಆಶ್ವಾಸನೆ ನೀಡಿದಂತೆ ನಾವು ಈ ಕಾರ್ಯಕ್ರಮವನ್ನು ನಡೆಸಿ ಕೊಟ್ಟಿದ್ದೇವೆ, ಎಲ್ಲಾದಕ್ಕೂ ಸಮಿತಿಯ ರಚಿಸಿ ವಧು ವರರ ವೇದಿಕೆಗೂ ಸಮಿತಿ ಮಾಡಿ ಅಧ್ಯಕ್ಷರ ಆಯ್ಕೆ ಮಾಡಿ ಕಾರ್ಯಕ್ರಮ ಮಾಡಲಾಗುತ್ತಿದೆ. ಶ್ರಮಪಟ್ಟ ಜಿಲ್ಲೆಯ ಯುವಕರ, ಗ್ರಾಮಗಳ ಸುತ್ತಿ ಶ್ರಮಿಸಿದ ಮುಖಂಡರ ಬಗ್ಗೆ ಸಹಕರಿಸಿದ ಯುವಕರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ಶಿವಮೊಗ್ಗ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರು ಗೋವಿಂದ ನಾಯಕ್ ರವರು, ‌ಸಮಗಾರ ಸಮಾಜ ಮತ್ತು ಪತ್ತಿನ ಸಹಕಾರ ಸಂಘ ಮಾಡುವಲ್ಲಿ ಶ್ರಮಿಸಿದ ಮಾಹಿತಿ ನೀಡಿದರು.

ಶಿವಮೊಗ್ಗ ಜಿಲ್ಲಾ ಸಮಗಾರ ಸಮಾಜ ಹಿತರಕ್ಷಣಾ ವೇದಿಕೆ ಅಧ್ಯಕ್ಷರು ಶ್ರೀ ಚನ್ನವೀರಪ್ಪ ಗಾಮನಗಟ್ಟಿ ರವರು, ಸಮಾಜದ ಜನರನ್ನು ಒಟ್ಟು ಮಾಡಲು ಬಹಳಷ್ಟು ಶ್ರಮಿಸಲಾಗಿದೆ, ಇಂದಿನ ಸಮಾಜದ ತಾರತಮ್ಯ, ಜಾತಿ ವ್ಯವಸ್ಥೆಯಿಂದ ಯಾರೂ ತಮ್ಮ ಸಮಾಜದ ಹೆಸರನ್ನು ಹೇಳುವ ಸ್ಥಿತಿಯಲ್ಲಿಲ್ಲ, ಆದರೂ ಅವರನ್ನೆಲ್ಲ ಒಟ್ಟುಗೂಡಿಸಿ ಆರ್ಥಿಕ ದುರ್ಬಲರನ್ನು ಪ್ರಬಲಗೊಳಿಸಲು ಸಮಗಾರರ ಹಿತರಕ್ಷಣೆ ವೇದಿಕೆ, ಮಹಿಳೆಯರ ಮುನ್ನಡೆಗೆಗಾಗಿ ಮಹಿಳಾ ಘಟಕ ರಚಿಸಲಾಗಿದೆ, ಸಮಾಜದೊಟ್ಟಿಗೆ ಕೈಜೋಡಿಸುವವರಿಗೆ ಆರ್ಥಿಕ ಪ್ರಬಲಕ್ಕಾಗಿ ಸಮಾಜದಿಂದ ಪತ್ತಿನ ಸಹಕಾರ ಸಂಘ ಮಾಡಲಾಯಿತು. ಸಮಾಜದ ಆರ್ಥಿಕ ದುರ್ಬಲ ವರ್ಗದವರಿಗೆ ಶವ ಸಂಸ್ಕಾರಕ್ಕೆ 5000 ಧನಸಹಾಯ ನೀಡಲು ತೀರ್ಮಾನಿಸಲಾಗಿದೆ ಸಮಾಜದ ಏಳಿಗೆಗಾಗಿ ಹಲವು ಯೋಜನೆಗಳನ್ನು ಶಿವಮೊಗ್ಗ ಹಿತ ರಕ್ಷಣಾ ವೇದಿಕೆಯು ರೂಪಿಸಲಾಗಿದೆ, ವಿದ್ಯಾವಂತ ಪದವೀಧರರ ಯುವಕ ಯುವತಿಯರಿಗೆ ಉದ್ಯೋಗ ಲಭಿಸಲು ನುರಿತ ತಜ್ಞರಿಂದ ತರಬೇತಿಗಳನ್ನು ನೀಡಲು ಯೋಜನೆಗಳನ್ನು ರೂಪಿಸಲಾಗಿದೆ, ಯಾರು ಇನ್ನು ಮುಂದೆ ಹಿಂಜರಿಕೆ ಇಲ್ಲದೆ ನಮ್ಮ ಸಮಗಾರ ಸಮಾಜದ ಹೆಸರನ್ನು ಹೇಳಿ ನಮ್ಮ ಸಮಾಜ ಕಾರ್ಯಗಳಲ್ಲಿ ಕೈಜೋಡಿಸುವವರಿಗೆ ಹಿತರಕ್ಷಣೆ ವೇದಿಕೆಯಿಂದ ಎಲ್ಲಾ ಸೌಲಭ್ಯಗಳು ದೊರೆಯುವುದು ಎಂದು ಹೇಳಿದರು.

ಶಿವಮೊಗ್ಗ ಸಮಗಾರ ಸಮಾಜದ ವಧು-ವರರ ವೇದಿಕೆ ಅಧ್ಯಕ್ಷರು ಶ್ರೀ ಡಿ. ನಾಗರಾಜ್ ರವರು ವಧು ವರರ ಬಗ್ಗೆ ಮಾಹಿತಿ ನೀಡಿದರು.

ಸಮಾವೇಶ ಕಾರ್ಯಕ್ರಮದಲ್ಲಿ ರಾಜ್ಯದ ಮೂಲೆ ಮೂಲೆಯಿಂದ ವಧು-ವರರು ಆಗಮಿಸಿದರು, ಈ ಸಂದರ್ಭದಲ್ಲಿ ಸಮಾಜದ ಪದಾಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.

#ವಿಶ್ವ #ಭಾರತ #ಕರ್ನಾಟಕ #ಶಿವಮೊಗ್ಗ #ಸಮಗಾರ #ಚರ್ಮಕಾರ

Spread the love

You may also like

Leave a Comment