28
ಸಕ್ರೇಬೈಲು ಆನೆ ಬಿಡಾರದ ಆನೆಗೆ ಫೈಬರ್ ಗ್ಲಾಸ್ ಕ್ಯಾಸ್ಟಿಂಗ್ ಚಿಕಿತ್ಸೆ ಯಶಸ್ವಿಯಾಗಿದೆ, ದೇಶದಲ್ಲೇ ಮೊದಲ ಬಾರಿ ಆನೆಗೆ ಫೈಬರ್ ಗ್ಲಾಸ್ ಕ್ಯಾಸ್ಟಿಂಗ್ ಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದ್ದು ಅದು ಕೂಡ ನಮ್ಮ ಶಿವಮೊಗ್ಗದ ಸಕ್ರೇಬೈಲು ಆನೆ ಬಿಡಾರದಲ್ಲಿ ನಡೆದಿದೆ.
ಕ್ರಾಲ್‌ನಲ್ಲಿ ಬಿದ್ದು ಎಡಗಾಲಿನ ಮೂಳೆ ಮುರಿದುಕೊಂಡಿದ್ದ 4 ಟನ್ ತೂಕದ ದ್ರೋಣ ಆನೆಗೆ
ಸಾಮಾನ್ಯ POP ಬದಲು ಅತ್ಯಂತ ಹಗುರವಾದ ಫೈಬರ್ ಗ್ಲಾಸ್ ಕ್ಯಾಸ್ಟಿಂಗ್ ಬಳಸಿದ ವೈದ್ಯರು, 30 ದಿನಗಳ ಕಾಲ ಕ್ಯಾಸ್ಟಿಂಗ್ ಹಾಗೂ ಹೈಡ್ರೋ ಥೆರಪಿ (ನೀರಿನ ಚಿಕಿತ್ಸೆ) ಮೂಲಕ ಬೇಗ ಗುಣಮುಖವಾದ ಆನೆ
ಸತತ 4 ತಿಂಗಳ ಕ್ರಾಲ್ ಚಿಕಿತ್ಸೆ ನಂತರ ದ್ರೋಣ ಇದೀಗ ಸಂಪೂರ್ಣ ಗುಣಮುಖಗೊಂಡಿದ್ದಾನೆ,
ಡಾ. ಮುರಳಿ ಮನೋಹರ್ ಮತ್ತು ಡಾ. ಮಹೇಶ್ ತಂಡದಿಂದ ಅನೇಕ ಸವಾಲುಗಳ ನಡುವೆಯು ಆನೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಒಟ್ಟು 90 ಸಾವಿರ ರೂ. ವೆಚ್ಚದಲ್ಲಿ ಯಶಸ್ವಿಯಾದ ಅಪರೂಪದ ಚಿಕಿತ್ಸೆ ಇದಾಗಿದ್ದು ಇದೀಗ ದ್ರೋಣ ಇತರ ಆನೆಗಳೊಂದಿಗೆ ನಿತ್ಯ ಕಾಡಿಗೆ ಹೋಗಿ ಬರುತ್ತಿದ್ದಾನೆ.

